ಅಝೋಲ್ಲಾ ಜೈವಿಕಗೊಬ್ಬರ
ಅಝೋಲ್ಲಾ ಎಂಬುದು ನೀರಿನ ಮೇಲೆ ತೇಲಾಡಿಕೊಂಡು ಬೆಳೆಯಬಲ್ಲ ಒಂದು ಸಸ್ಯ. ಇದು ವಾತಾವರಣದಲ್ಲಿರುವ ಸಾರಜನಕವನ್ನು ಹೀರಿ ಹಿಡಿದಿಟ್ಟುಕೊಳ್ಳುವ ಶಕ್ತಿ ಹೊಂದಿದೆ. ಈ ಕಾರ್ಯದಲ್ಲಿ ಇದರಲ್ಲಿರುವ ಅನಾಬಿನಾ ಎಂಬ ನೀಲಿ ಹಸಿರು ಪಾಚಿ ಸಹಾಯ ಮಾಡುತ್ತದೆ. ಇದರ ಕಾಂಡ ಮತ್ತು ಎಲೆಗಳು ಬಹಳ ಚಿಕ್ಕದಾಗಿದ್ದು, ಒಂದರ ಮೇಲೊಂದು ಜೋಡಿಸಿದಂತಿವೆ. ಮಣ್ಣಿನ ರಸಸಾರ 5.5 ಇರುವ ಮತ್ತು ವಾತಾವರಣದಲ್ಲಿ 26-270 ಸೆಲ್ಸಿಯಸ್ ಉಷ್ಣಾಂಶವಿರುವ ಪ್ರದೇಶವನ್ನು ಇದು ಹೆಚ್ಚಾಗಿ ಬಯಸುತ್ತದೆ. ಜೊತೆಗೆ ಇದರ ಬೆಳವಣಿಗೆಗೆ ಒಳ್ಳೆಯ ಸೂರ್ಯರಶ್ಮಿ ಸಹ ಅಗತ್ಯ.
Source: ಸುಧಾರಿತ ಬೇಸಾಯ ಕ್ರಮಗಳು ಸೆಪ್ಟೆಂಬರ್ – 2012, ಕೃಷಿ ವಿಶ್ವವಿದ್ಯಾಲಯ, ಧಾರವಾಡ ಹಾಗೂ ಕೃಷಿ ವಿಶ್ವವಿದ್ಯಾಲಯ, ರಾಯಚೂರು
- Login to post comments
- 1132 reads
