Skip to main content

ಕಡಲೆ ಕಾಯಿ ಕೊರಕ ಕೀಟದ ವಿವರ ಮತ್ತು ಹಾನಿಯ ಲಕ್ಷಣಗಳು

ಕಡಲೆ ಕಾಯಿ ಕೊರಕ ಕೀಟದ ವಿವರ ಮತ್ತು ಹಾನಿಯ ಲಕ್ಷಣಗಳು

ಕೀಟದ ವಿವರ :

  • ಹಳದಿ ಬಣ್ಣದ ಪತಂಗಗಳು

ರೆಕ್ಕೆ:

  • ಮುಂದಿನ ರೆಕ್ಕೆಯಲ್ಲಿ "ಯು" ಆಕಾರದ ಕರಿ ಚುಕ್ಕೆ
  • ಹಿಂದಿನ ರೆಕ್ಕೆ ಕರಿಯ ಅಂಚನ್ನು ಹೊಂದಿರುತ್ತದೆ

ತತ್ತಿ :

  • ಸಂಖ್ಯೆ: 500-1000 ತತ್ತಿ (ಒಂದು ಹೆಣ್ಣು ಪತಂಗ)
  • ಆಕಾರ: ಹಳದಿ ಬಣ್ಣ, ದುಂಡಾಗಿದ್ದು, ಸುತ್ತಲೂ ದಿಂಡುಗಳಿಂದ ಕೂಡಿರುತ್ತದೆ
  • ಇಡುವ ಜಾಗ: ತತ್ತಿಯನ್ನು ಒಂದೊಂದಾಗಿ  ಎಲೆ, ಮೊಗ್ಗು, ಕುಡಿ, ಹೂವು ಮತ್ತು  ಎಳೆ ಕಾಯಿಗಳು
  • ಕೋಶಾವಸ್ಥೆ: ಮಣ್ಣಿನಲ್ಲಿ

        

 ತತ್ತಿ                                ಮರಿಹುಳು                ಕೋಶಾವಸ್ಥೆ                ಪತಂಗಗಳು

ಹಾನಿಯ ಲಕ್ಷಣಗಳು:
ಹಾನಿ:

  • ಹಾನಿಯ ಹಂತ: ಮರಿಹುಳು
  • ಮರಿಹುಳು ಪ್ರಾರಂಭದಲ್ಲಿ ಎಲೆ ಹಸಿರು ಭಾಗವನ್ನು ಕೆರೆದು ತಿನ್ನುತ್ತದೆ.
  • ಹೂವು, ಮೊಗ್ಗು, ಮತ್ತು ಕಾಯಿಗಳನ್ನು ಕೊರೆಯುತ್ತದೆ.
  • ಕೊನೆಯ ಮರಿಹುಳು ಕಾಯಿಗಳನ್ನು ಕೊರೆದು ಕಾಳನ್ನು ತಿನ್ನುತ್ತದೆ.
  • ಮೊಗ್ಗು ಮತ್ತು ಹೂಗಳ ಉದುರುತ್ತದೆ.
  • ಕಾಳುಕಟ್ಟುವುದು ಕಡಿಮೆ.
  • ಶೇ 50-70 ರಷ್ಟು ಹಾನಿ ಮಾಡುವುದು.

                                          

ಎಲೆಗಳು ಬಿಳಿ ಬಣ್ಣಕ್ಕೆ ತಿರಿಗಿರುವುದು     ಮರಿ ಹುಳು ಕಾಯಿಯನ್ನು ಕೊರೆಯುತ್ತಿರುವುದು   ಕಾಯಿಯ ಮೇಲೆ ರಂಧ್ರಗಳು

ಲಕ್ಷಣಗಳು:

  • ಕೊರೆಯುವ ಹುಳುವಿನ ದೇಹದ ಅರ್ಧಭಾಗ ಕಾಯಿಯೊಳಗೆ ಮತ್ತರ್ಧಭಾಗ  ಕಾಯಿಯ ಹೊರಭಾಗದಲ್ಲಿ ಇರುತ್ತದೆ 
  • ಕಾಯಿಯ ಮೇಲೆ ರಂಧ್ರಗಳು

   

   

 

 

0
Your rating: None