ಕೃಷಿಯಲ್ಲಿ ಎರೆಗೊಬ್ಬರದ ಉಪಯೋಗ
ಎರೆಗೊಬ್ಬರ ಅತ್ಯುತ್ತಮವಾದ ಸಾವಯವ ಗೊಬ್ಬರವಾಗಿದ್ದು, ಬೆಳೆಗಳಿಗೆ ಬೇಕಾಗುವ ಮುಖ್ಯ ಮತ್ತು ಲಘು ಪೋಷಕಾಂಶಗಳನ್ನು ಬೆಳೆವರ್ದಕಗಳನ್ನು ಹೊಂದಿರುತ್ತದೆ. ಎರೆ ಕೃಷಿಯನ್ನು ಈ ಕೆಳಗಿನಂತೆ ಮೂರು ರೀತಿಯಲ್ಲಿ ಅಳವಡಿಸಬಹುದಾಗಿದೆ.
1.ಎರೆಮಡಿಗಳಲ್ಲಿ ಉತ್ಪಾದಿಸಿದಂತಹ ಎರೆಗೊಬ್ಬರವನ್ನು ಬೆಳೆಗಳಿಗೆ ಕೊಡುವುದು. ಸಾಮಾನ್ಯವಾಗಿ ಎಲ್ಲ ತರಹದ ಬೆಳೆಗಳಿಗೆ ಬಿತ್ತುವ ವೇಳೆಯಲ್ಲಿ ಪ್ರತಿ ಹೆಕ್ಟೇರಿಗೆ 2.5 ಟನ್ ಪ್ರಮಾಣದಲ್ಲಿ ಎರೆಗೊಬ್ಬರವನ್ನು ಕೊಡಬೇಕು.
2.ತೋಟದ ಬೆಳೆಗಳಲ್ಲಿ (ಹಣ್ಣು ಮತ್ತು ಪ್ಲಾಂಟೇಶನ್ ಬೆಳೆಗಳೂ ಇತ್ಯಾದಿ) ಎರೆಹುಳುಗಳನ್ನೇ ಬಿಟ್ಟು ಎರೆ ಕೃಷಿ ಮಾಡುವುದು ಸ್ಥಾನಿಕ ಎರೆಕೃಷಿ. ಬೆಳೆಗಳಲ್ಲಿ ಎರೆಹುಳುಗಳನ್ನು ಮಣ್ಣಿನಲ್ಲಿ ಸಲುಗಳ ಮಧ್ಯ ಅಥವಾ ಗಿಡದ ಸುತ್ತ ಬಿಟ್ಟು, ಸಾಕಷ್ಟು ಪ್ರಮಾಣದಲ್ಲಿ ಸಾವಯವ ಕಚ್ಚಾ ಪದಾರ್ಥಗಳನ್ನು ಮಣ್ಣಿನ ಮೇಲೆ ಹರಡಬೇಕು. 10 ರಿಂದ 15 ದಿನಕ್ಕೊಮ್ಮೆ ನೀರನ್ನು ಕೊಡುತ್ತಾ ಹೋದಲ್ಲಿ ಹುಳೂಗಳೂ ಭೂಮಿಯಲ್ಲಿ ಇದ್ದು, ಸಾವಯವ ಪದಾರ್ಥಗಳನ್ನು ತಿಂದು ಉತ್ತಮವಾದ ಗೊಬ್ಬರವನ್ನು ಬೆಳೆಯ ಸಾಲುಗಳಲ್ಲಿಯೇ ಉತ್ಪಾದಿಸುತ್ತವೆ. ಈ ಪದ್ಧತಿಯನ್ನು ಅಳವಡಿಸಿದಾಗ ಮಣ್ಣಿನಲ್ಲಿ ಯಾವುದೇ ತರಹದ ರಾಸಾಯನಿಕಗಳಣ್ನು ಮಿಶ್ರಣ ಮಾಡಬಾರದು, ಅವಶ್ಯಕತೆ ಇದ್ದಲ್ಲಿ ಎಲೆಗಳ ಮುಖಾಂತರ ಪೋಷಕಾಂಶಗಳನ್ನು ಮತ್ತು ಕೀಟನಾಶಕಗಳನ್ನು ಸಿಂಪರಣೆ ಮಾಡಬಹುದು.
3. ಎರೆಹುಳುಗಳ ದೇಹವನ್ನು ಹಾಗೂ ಹಿಕ್ಕೆಯನ್ನು ನೀರಿನಿಂದ ತೊಳೆದು ಬಂದ ದ್ರಾವಣವನ್ನು (ಎರೆಜಲ) ಬೆಳೆಗಳಿಗೆ ಸಿಂಪಡಿಸುವುದರಿಂದ ಬೆಳೆಯ ಇಳುವರಿ ಅಧಿಕಗೊಳ್ಳುತ್ತದೆ. ಎರೆಜಲದಲ್ಲಿ ಮುಖ್ಯ ಲಘುಪೋಷಕಾಂಶಗಳು, ಬೆಳೆವರ್ಧಕಗಳು ಮತ್ತು ಉಪಯುಕ್ತ ಸೂಕ್ಷ್ಮಾಣು ಜೀವಿಗಳು ಇರುವುದಾಗಿ ಕಂಡುಬಂದಿದೆ.
Source: ಸುಧಾರಿತ ಬೇಸಾಯ ಕ್ರಮಗಳು ಸೆಪ್ಟೆಂಬರ್, 2012, ಕೃಷಿ ವಿಶ್ವವಿದ್ಯಾಲಯ, ಧಾರವಾಡ ಹಾಗೂ ಕೃಷಿ ವಿಶ್ವವಿದ್ಯಾಲಯ, ರಾಯಚೂರು
- Login to post comments
- 939 reads
