Skip to main content

ಭತ್ತದಲ್ಲಿ ದುಂಡಾಣು ಮಚ್ಚೆ ರೋಗದ ಹಾನಿ ಮತ್ತು ಲಕ್ಷಣಗಳು

ಭತ್ತದಲ್ಲಿ ದುಂಡಾಣು ಮಚ್ಚೆ ರೋಗದ ಹಾನಿ ಮತ್ತು ಲಕ್ಷಣಗಳು

ರೋಗಣುಗಳಿಗೆ  ಸೂಕ್ತವಾದ  ವಾತಾವರಣ:

  • ಒತ್ತಾಗಿ ನಾಟಿ ಮಾಡುವುದು
  • ಹೆಚ್ಚಿನ ಪ್ರಮಾಣದಲ್ಲಿ ಸಾರಜನಕಯುಕ್ತ ಗೊಬ್ಬರಗಳನ್ನು ಕೊಡುವುದು
  • ಮೋಡಕವಿದ ವಾತಾವರಣ
  • ರೋಗಾಣುಗಳ ಆಶ್ರಯ ತಾಣ: ಬೀಜ, ಮಣ್ಣು ಅಥವಾ ಕೊಳೆತ ಗಿಡಗಳು ಮತ್ತು ಪಾರ್ಯಾಯ ಬೆಳೆಗಳು

ರೋಗದ ವಿವರ:

  • ಬರುವ ಕಾಲ: ತೆಂಡೆ ಹೊಡಿಯುವ ಹಂತದಿಂದ ಕಾಳು ಕಟ್ಟುವ ಹಂತದವರೆಗೆ
  • ಹಾನಿಯಾ ಪ್ರಮಾಣ: ಶೇ. 6-60 %
  • ಪಾರ್ಯಾಯ ಬೆಳೆಗಳು: ಹುಲ್ಲು (ಲೀರ್ಸಿಯ ಸ್ಪಿಸಿಸ್ ಮತ್ತು ಸೈಪರಸ್ ರೊಟಾಂಡಸ್)

ರೋಗದ ಲಕ್ಷಣಗಳು:

  • ಈ ಹಾನಿಯೂ  ಎರಡು  ಅಂತದಲ್ಲಿ  ಬರುತ್ತದೆ

1. ಸೊರಗು ಹಂತ ಅಥವಾ ಕ್ರೆಸೆಕ್

  • ತೆಂಡೆ ಹೊಡೆಯುವ  ಹಂತದಲ್ಲಿ ಕಾಣಿಸಿಕೊಳ್ಳುತ್ತದೆ
  • ತೆಂಡೆಗಳು ಸಾಯುತ್ತವೆ ಮತ್ತು ಈ ಲಕ್ಷಣಗಳು ಕಾಂಡ ಕೊರೆಕದಿಂದ ಅದಂತೆ ಕಾಣುತ್ತದೆ

ಸೊರಗು ಹಂತ ಅಥವಾ ಕ್ರೆಸೆಕ್  ಲಕ್ಷಣಗಳು

2. ದುಂಡಾಣು ಮಚ್ಚೆ ಹಂತ  

  • ಎಲೆಯ ತುದಿಗೆ ಹಸಿರು ಹಳದಿ ಚುಕ್ಕೆಗಳು ಕಾಣಿಸಿಕೊಳ್ಳುತ್ತೆ
  • ಚುಕ್ಕೆಗಳು ದೊಡ್ಡದಾಗಿ ಹಳದಿ ಬಣ್ಣಕ್ಕೆ ತಿರುಗುತ್ತವೆ
  • ಅಲೆಯಾಕಾರದ ತುದಿಗಳು
  • ಎಲೆಯ ಅಂಚಿನಲ್ಲಿ ಉದ್ದನೆಯ ಒಣಗಿದ ಪಟ್ಟಿಗಳು
  • ಗರಿಗಳು ಒಣಗಿ ತುದಿ ಹೆಡೆಯಂತೆ ಬಾಗಿರುತ್ತದೆ
  • ತೆನೆಗಳು ಒಣಗಿ ಕಾಳು ಕಟ್ಟುವುದಿಲ್ಲ

ದುಂಡಾಣು ಮಚ್ಚೆ ಹಂತ ಲಕ್ಷಣಗಳು 


         



 

0
Your rating: None