Submitted by naipagropediaraichur on Mon, 09/04/2012 - 09:36
Posted in
ಮೆಣಸಿನಕಾಯಿ ಬೆಳೆಯಲ್ಲಿ ಬರುವ ಎಲೆ ಮುಟುರು ರೋಗ
ರೋಗದ ಲಕ್ಷಣಗಳು:
- ನಂಜು ತಗುಲಿದ ಎಲೆಗಳ ಮೇಲೆ ಹಸಿರು ಹಳದಿ ಬಣ್ಣದ ಉದ್ದನೆಯ ಪಟ್ಟಿಗಳು ಕಾಣಿಸಿಕೊಳ್ಳುವ್ರದಲ್ಲದೇ ಚುಕ್ಕೆಗಳು ಉಬ್ಬು - ದಿನ್ನೆಗಳಾಗಿ ಕಂಡು ಬರುತ್ತವೆ.
- ಎಲೆಗಳು ಚಿಕ್ಕದಾಗಿ, ಗಿಡಗಳು ಗಿಡ್ಡವಾಗಿ, ಹಳದಿಯಾಗಿ ಮುಟುರಿಕೊಂಡು ಬೆಳವಣಿಗೆ ಕಡಿಮೆಯಾಗುವ್ರದು.
- ಕೆಲವೊಂದು ಸಾರಿ ಎಲೆಗಳು ಚೆನ್ನಾಗಿ ಕಂಡುಬಂದರೂ ಸುರಳಿಯಾಕಾರದ ಉಂಗುರುಗಳು ಕಂಡುಬರುತ್ತವೆ.
- ಇಂತಹ ಗಿಡಗಳು ಯಾವ್ರದೇ ಕಾಯಿ ಅಥವಾ ಹೂವನ್ನು ಬಿಡುವ್ರದಿಲ್ಲ, ಕಾಯಿ ಬಿಟ್ಟರೂ ಸಣ್ಣ ಸಣ್ಣ ಚಿಗುರು ಕಾಯಿಗಳನ್ನು ಕಾಣಬಹುದು.
ಎಲೆ ಮುದುರುವ ಲಕ್ಷಣ ಎಲೆಗಳು ಮುದುಡಿ ಚಿಕ್ಕದಾಗುವುದು
ಗಿಡಗಳು ಗಿಡ್ದವಾಗುವುದು
ರೋಗ ಪ್ರಸರಣ:
- ಈ ರೋಗವ್ರ ನುಶಿ ಮತ್ತು ಬಿಳಿ ನೊಣಗಳಿಂದ ಗಿಡದಿಂದ ಗಿಡಕ್ಕೆ ಹರಡುತ್ತವೆ.
- ಇದಲ್ಲದೆ ಎಲೆ ಮುದುರುವಿಕೆಗೆ ಥ್ರಿಪ್ಸ್, ಹೇನು, ಜೇಡ ನುಶಿ ಮುಂತಾದ ಕೀಟಗಳು ಕೂಡ ಕಾರಣವಾಗುತ್ತವೆ.
- Login to post comments
- 1486 reads
