Skip to main content

ಮೆಣಸಿನಕಾಯಿ ಬೆಳೆಯ ಜನವರಿ ತಿಂಗಳ ಕಾರ್ಯ/ ಕಾಲ ಸೂಚಕ

ಮೆಣಸಿನಕಾಯಿ ಬೆಳೆಯ ಜನವರಿ ತಿಂಗಳ ಕಾರ್ಯ/ ಕಾಲ ಸೂಚಕ

ಕೀಟ / ರೋಗದ ಹೆಸರು

ಹಾನಿಯ ಲಕ್ಷಣಗಳು

ಕೀಟ / ರೋಗ ಗುರುತಿಸುವಿಕೆ

ಹತೋಟಿ ಕ್ರಮಗಳು


ಥ್ರಿಪ್ಸ್ ನುಶಿ,

ಸಿರ್ಟೋಥ್ರಿಪ್ಸ್ ಡಾರ್ಸ್ಯಾಲಿಸ್

ಎಲೆಗಳು ಮೇಲೆ ಮುದುಡಿಕೊಂಡು ತಿರುಚಿ ಕೊಳ್ಳುತ್ತದೆ.

ಗಿಡದ ಬೆಳವಣಿಗೆ ಕುಂಠಿತಗಳ್ಳುತ್ತದೆ.

 

ಬೀಜೋಪಚಾರ (ಪ್ರತಿ ಕೆ. ಜಿ. ಬೀಜಕ್ಕೆ ):10 ಗ್ರಾಂ ಇಮಿಡಾಕ್ಲೋಪ್ರಿಡ್ 70 ಡಬ್ಲು.ಎಸ್.  0.2 ಮಿ. ಲೀ ಇಮಿಡಾಕ್ಲೋಪ್ರಿಡ್ 17.8 ಎಸ್. ಎಲ್  ಅಥವಾ 1.0 ಮಿ.ಲೀ. ಫಿಪ್ರೋನಿಲ್ 5 ಎಸ್. ಸಿ. ಸಿಂಪಡಿಸಬೇಕು.


ಮೈಟ್ ನುಶಿ, ಫಾಲೀಫ್ಯಾಗೋಟಾರ್ಸೋನಾಮ್ಸ್ ಲ್ಯಾಟ್ಸ್

 

ನುಶಿಯ ಬಾಧಿತ ಎಲೆಗಳ ದೇಟು ಉದ್ದವಾಗಿ, ಬಿರುಸಾಗಿ ಕಪ್ಪು ಹಸಿರು ಬಣ್ಣಕ್ಕೆ ತಿರುಗಿ ಒಳಗಡೆ ಮುದುಡಿಕೊಳ್ಳುತ್ತವೆ.

ಗಿಡಗಳ ಬೆಳವಣಿಗೆ ಕುಂಠಿತಗೊಳ್ಳುತ್ತೆ.

 

2.0 ಮಿ.ಲೀ. ಫೆನಜಕ್ವಿನ್ 10 ಇ.ಸಿ. ಅಥವಾ 0.3 ಮಿ. ಲೀ. ವರ್ಟಿಮೆಕ್ 1.9 ಇ.ಸಿ. ಅಥವಾ 2.50 ಮಿ.ಲೀ. ಡೈಕೊಫಾಲ್ 18.5 ಇ.ಸಿ. ಅಥವಾ  3 ಗ್ರಾಂ ನೀರಿನಲ್ಲಿ ಕರಗುವ ಗಂಧಕ ಸಿಂಪಡಿಸಬೇಕು.

 ಚಿಬ್ಬು ರೋಗ

ಹಣ್ಣುಗಳ ಮೇಲೆ ವೃತ್ತಾಕಾರದ, ತಗ್ಗಾದ ಕಪ್ಪನೆಯ ಚುಕ್ಕೆಗಳನ್ನು ಕಾಣಬಹುದು

 

0.2 ಗ್ರಾಂ ಕ್ಯಾಪಟ್ಫಾಲ್ ಸಿಂಪಡಿಸಿದ ನಂತರ  0.25 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಮತ್ತು 0.1 ಗ್ರಾಂ   ಕಾರ್ಬೆಂಡೈಜಿಮ್

 ಬೂದಿ ರೋಗ

ಮೊದಲ ಹಂತದಲ್ಲಿ ಎಲೆಗಳ ಮೇಲೆ ಬೂದಿ ಬಣ್ಣದ ಮಚ್ಛೆಗಳು ಕಂಡು ಬಂದು ನಂತರ ಬಿಳಿ ಬಣ್ಣದ ಶಿಲೀಂದ್ರದ ಬೆಳವಣಿಗೆ ಎಲೆಯನ್ನು ಸಂಪೂರ್ಣವಾಗಿ ಆವರಿಸುತ್ತದೆ

 

1 ಮಿ.ಲೀ ಡೈಯನೊಕ್ಯಾಪ್ ಅಥವಾ 2 ಗ್ರಾಂ ನೀರಿನಲ್ಲಿ ಕರಗುವ ಗಂಧಕ ಒಂದು ಲೀ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು

ಹೂ ಬಿಡುವ ಮುಂಚೆ ಪ್ರತಿ ಎಕರೆಗೆ 8-10 ಕೆಜಿ ಗಂಧಕವನ್ನು ಧೂಳಿಕರಿಸಬೇಕು

ಎಲೆ ಮುಟುರು ರೋಗ

ಚಿಗುರು ಎಲೆಗಳು ಕೀಟ ಮತ್ತು ನಂಜಾಣು ಹಾವಳಿಯಿಂದ ಎಲೆಗಳು ಮುಟುರು ಗೊಳ್ಳುತ್ತದೆ

 

1.5 ಮಿ.ಲೀ. ಮೋನೋಕ್ರೋಟೊಪಾಸ್ ಅಥವಾ 2 ಮಿ.ಲೀ ಡೈಮಿಥೋಯೇಟ್ ಅಥವಾ 2 ಮಿ.ಲೀ. ಅಸಿಫೇಟ್ ಒಂದು ಲೀ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು

0
Your rating: None