|
ಹಣ್ಣುಕೊರಕ,
ಹೆಲಿಕೋವೆರ್ಪಾ ಆರ್ಮಿಜೆರ ಮತ್ತು
ಸ್ಪೋಡೋಪ್ಟೆರ ಲಿಟ್ಟೂರ
|
ಹಣ್ಣಿನ ತೊಟ್ಟಿನ ಕೆಳಭಾಗದಲ್ಲಿ ರಂಧ್ರಗಳು ಕಂಡು ಬರುತ್ತವೆ
ಹಾನಿಗೀಡಾದ ಹಣ್ಣು ಕೊಳೆತು ಕೆಳಗೆ ಉದುರುತ್ತದೆ
|

|
100 ಎಲ್.ಇ ಹೆಚ್.ಎ ಎನ್.ಪಿ.ವಿ ಅಥವಾ
100 ಎಲ್.ಇ ಎಸ್.ಲ್ ಎನ್.ಪಿ.ವಿ ಅಥವಾ
0.20 ಮಿ.ಲೀ ಸ್ಪಿನೋಸಾಡ್ ಸಿಂಪಡಿಸಬೇಕು.
|
|
ಮೈಟ್ ನುಶಿ
ಫಾಲೀಫ್ಯಾಗೋಟಾರ್ಸೋನಾಮ್ಸ್ ಲ್ಯಾಟ್ಸ್
|
ನುಶಿಯ ಬಾಧಿತ ಎಲೆಗಳು ದೇಟು ಉದ್ದವಾಗಿ, ಬಿರುಸಾಗಿ ಕಪ್ಪು ಹಸಿರು ಬಣ್ಣಕ್ಕೆ ತಿರುಗಿ ಒಳಗಡೆ ಮುದುಡಿಕೊಳ್ಳುತ್ತವೆ.
ಗಿಡಗಳ ಬೆಳವಣಿಗೆ ಕುಂಠಿತಗೊಳ್ಳುತ್ತೆ.
|
|
2.0 ಮಿ.ಲೀ. ಫೆನಜಕ್ವಿನ್ 10 ಇ.ಸಿ. ಅಥವಾ 0.3 ಮಿ. ಲೀ. ವರ್ಟಿಮೆಕ್ 1.9 ಇ.ಸಿ. ಅಥವಾ 2.50 ಮಿ.ಲೀ. ಡೈಕೊಫಾಲ್ 18.5 ಇ.ಸಿ. ಅಥವಾ 3 ಗ್ರಾಂ ನೀರಿನಲ್ಲಿ ಕರಗುವ ಗಂಧಕ ಸಿಂಪಡಿಸಬೇಕು.
|
|
ಬೂದಿ ರೋಗ
|
ಮೊದಲ ಹಂತದಲ್ಲಿ ಎಲೆಗಳ ಮೇಲೆ ಬೂದಿ ಬಣ್ಣದ ಮಚ್ಛೆಗಳು ಕಂಡು ಬಂದು ನಂತರ ಬಿಳಿ ಬಣ್ಣದ ಶಿಲೀಂದ್ರದ ಬೆಳವಣಿಗೆ ಎಲೆಯನ್ನು ಸಂಪೂರ್ಣವಾಗಿ ಆವರಿಸುತ್ತದೆ
|
|
1 ಮಿ.ಲೀ ಡೈಯನೊಕ್ಯಾಪ್ ಅಥವಾ 2 ಗ್ರಾಂ ನೀರಿನಲ್ಲಿ ಕರಗುವ ಗಂಧಕ ಒಂದು ಲೀ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು
ಹೂ ಬಿಡುವ ಮುಂಚೆ ಪ್ರತಿ ಎಕರೆಗೆ 8-10 ಕೆಜಿ ಗಂಧಕವನ್ನು ಧೂಳಿಕರಿಸಬೇಕು
|