Skip to main content

ಹತ್ತಿಯಲ್ಲಿ ಹನಿ ನೀರಾವರಿ

 

ಹತ್ತಿಯು ವಾಣಿಜ್ಯ ಬೆಳೆಯಾಗಿರುವುದರಿಂದ ಹನಿ ನೀರಾವರಿಯನ್ನು ವಲಯ 3 ಮತ್ತು 8 ರಲ್ಲಿ ಸೂಕ್ತವಾಗಿ ಅಳವಡಿಸಬಹುದು. ಈ ಪದ್ಧತಿಯಿಂದ ಶೇ. 50 ರಷ್ಟು ನೀರಿನ ಉಳಿತಾಯ ಮಾಡಬಹುದಲ್ಲದೇ, ವಿದ್ಯುತ್, ರಸಗೊಬ್ಬರ ಮತ್ತು ಕೂಲಿ ಕೆಲಸಗಳ ವೆಚ್ಚವನ್ನು ಕಡಿಮೆ ಮಾಡಬಹುದು. ಸಂಕರಣ ಹತ್ತಿ ಬೀಜೋತ್ಪಾದನೆಯಲ್ಲಿ ಹನಿ ನೀರಾವರಿಯನನು ಅಳವಡಿಸುವುದರಿಂದ ಖಚರ್ು ಹೆಚ್ಚಾದರೂ ಕೂಡ ಉಳಿತಾಯದ ನೀರಿನಿಂದ ನೀರಾವರಿ ಕ್ಷೇತ್ರವನ್ನು ದ್ವಿಗುಣಗೊಳಿಸಿ ಇದರ ವೆಚ್ಚವನ್ನು 3-4 ವರ್ಷಗಳಲ್ಲಿ ಮರಳಿ ಪಡೆಯಬಹುದು. ನೀರು, ವಿದ್ಯುತ್ ಮತ್ತು ಕೂಲಿ ಕೆಲಸಗಾರರ ಅಭಾವ ಇದ್ದಲ್ಲಿ ಹನಿ ನೀರಾವರಿಯು ವರದಾನವಾಗಬಹುದು.
ಹನಿ ನೀರಾವರಿಯನನು ಹೈಬ್ರಿಡ್ ಹತ್ತಿ ಮತ್ತು ಹಿಸರ್ುಟಮ್ ಹತ್ತಿ ತಳಿಗಳಲ್ಲಿ ಶಿಫಾರಸು ಮಾಡಿದ ಅಂತರದಲ್ಲಿ ಸೂಕ್ತವಾಗಿ ಅಳವಡಿಸಬಹುದು.
ಇದರ ಬದಲಾಗಿ ಜೋಡು ಸಾಲು ಪದ್ಧತಿಯನ್ನು (60-120-60ಸೆಂ.ಮೀ) ಅಳವಡಿಸುವುದರಿಂದ ಹನಿ ನೀರಾವರಿಯ ಲ್ಯಾಟರಲ್ ಪೈಪುಗಳ ಸಂಖ್ಯೆಯನನು ಶೇ. 50 ರಷ್ಟು ಕಡಿಮೆ ಮಾಡಬಹುದು.
ಹನಿ ನೀರಾವರಿಯಲ್ಲಿ ನೀರನ್ನು ಪ್ರತಿದಿನ ಅಥವ 2-3 ದಿನಕ್ಕೊಮ್ಮೆ ಹತ್ತಿ ಬೆಳೆ ಪ್ರದೇಶದಲ್ಲಿ ಅವಿಯಾಗುವ ನೀರಿನ ಶೇ. 75 ರಷ್ಟನ್ನು ಶಕ್ತಿಮಾನ ಹತ್ತಿಗೆ ಮತ್ತು ಶೇ. 50 ರಷ್ಟನ್ನು ಹಿಸರ್ುಟಮ್ ತಳಿಗಳಿಗೆ ಕೋಷ್ಠಕದಲ್ಲಿ ತಿಳಿಸಿದಂತೆ ಒದಗಿಸಬೇಕು.

ಹನಿ ನೀರಾವರಿಯಲ್ಲಿ ರಸಗೊಬ್ಬರಗಳ ನಿರ್ವಹಣೆ:

ರಸಾವರಿ ಪದ್ಧತಿ: ರಸಗೊಬ್ಬರಗಳನ್ನು ಹನಿ ನೀರಾವರಿ ಮೂಕ ಕೊಡುವುದಕ್ಕೆ "ರಸಾವರಿ" ಎಂದು ಹೆಸರು. ಶಕ್ತಿಮಾನ್ ಹತ್ತಿ ಮತ್ತು ತಳಿಗಳಿಗೆ ಶಿಫಾರಸ್ಸು ಮಾಡಿದ ರಸಗೊಬರ್ಬರದ ಶೇ. 10ರಷ್ಟನ್ನು ಬಿತ್ತುವಾಗ, ಇನ್ನುಳಿದ ರಸಗೊಬ್ಬರವನ್ನು ಬಿತ್ತಿದ 30 ರಿಂದ 120 ದಿನಗಳವರೆಗೆ ಸಮಪ್ರಮಾಣದಲ್ಲಿ 5 ದಿನಗಳ ಅಂತರದಲ್ಲಿ ಮೇಲುಗೊಬ್ಬರವಾಗಿ ರಸಾವರಿ ಮಾಡುವುದರಿಂದ ಉತ್ತಮ ಇಳುವರಿ ಪಡೆಯಬಹುದು. ರಸಾವರಿಗೆ ಅಧಿಕ ಬೆಲೆಯ ದ್ರವರೂಪದ ರಸಗೊಬ್ಬರಗಳ ಬದಲಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಯೂರಿಯಾ, ಮ್ಯೂರೇಟ್ ಅಫ್ ಪೋಟ್ಯಾಷ್ ಮತ್ತು ಫಾಸ್ಪಾರಿಕ್ ಆಮ್ಲವನ್ನು ಸೂಕ್ತವಾಗಿ ಬಳಸಬಹುದು. ಫಾಸ್ಪಾರಿಕ್ ಆಮ್ಲದ ಬದಲಾಗಿ ಡಿ.ಎ.ಪಿ. ರಸಗೊಬ್ಬರವನ್ನು ನೀರಿನಲ್ಲಿ ಕರಗಿಸಿ ನಂತರ ತಿಳಿ ದ್ರಾವಣವನ್ನು ರಸಾವರಿಗೆ ಉಪಯೋಗಿಸಬಹುದು. ಕಳೆ, ಕೀಟ ಮತ್ತು ರೋಗಗಳ ನಿರ್ವಹಣೆಗೆ ನೀರಾವರಿ ಹತ್ತಿಗೆ ಶಿಫಾರಸ್ಸು ಮಾಡಿದ ಕ್ರಮಗಳನ್ನು ಅನುಸರಿಸಬೇಕು. ಹನಿ ನೀರಾವರಿ ಕ್ರಮದಿಂದ ಸಂಕರಣ ಹತ್ತಿಯಲ್ಲಿ 20-25 ಕ್ವಿಂಟಾಲ್ ಹಾಗು ಹಿಸರ್ುಟಮ್ ಹತ್ತಿಯಲ್ಲಿ 15-18 ಕ್ವಿಂಟಾಲ್ ಇಳುವರಿಯನನು ಪ್ರತಿ ಹೆಕ್ಟೆರಿಗೆ ಪಡೆಯಬಹುದು.
ಸೂಚನೆ:
ಆವಿ ನೀರಿನ ಶೇ. 75 ಮತ್ತು 50 ರಷ್ಟು ನೀರನ್ನು ಸಂಕರಣ ಮತ್ತು ತಳಿ ಹತ್ತಿಗೆ ಅನುಕ್ರಮವಾಗಿ ಹನಿ ನೀರಾವರಿ ಮೂಲಕ ಒದಗಿಸಬೇಕು.

0
Your rating: None