Skip to main content

ಎರೆಗೊಬ್ಬರದ ಉತ್ಪಾದನೆ

ಎರೆಗೊಬ್ಬರದ ಉತ್ಪಾದನೆ

ಎರೆಹುಳುಗಳನ್ನು ಮಡಿಗೆ ಬಿಟ್ಟನಂತರ ಸುಮಾರು 30-45 ದಿನಗಳಲ್ಲಿ ಮಡಿಯ ಮೇಲ್ಪದರದಲ್ಲಿ ಎರೆಗೊಬ್ಬರದ ಶೇಖರಣೆ ಪ್ರಾರಂಭವಾಗಿರುವುದು ಕಂಡುಬರುವುದು. ಒಟ್ಟು 60-75 ದಿನಗಳಲ್ಲಿ ಎರೆಗೊಬ್ಬರವು ಹೇರಳವಾದ ಪ್ರಮಾಣದಲ್ಲಿ ಉತ್ಪಾದನೆ ಆಗಿರುತ್ತದೆ. ಈ ವೇಳೆಗೆ ಮಡಿಯಲ್ಲಿ ಉಪಯೋಗಿಸಿದಂತಹ ಎಲ್ಲಾ ತ್ಯಾಜ್ಯ ವಸ್ತುಗಳು ಶೆ. 75 ರಷ್ಟು ಎರೆಗೊಬ್ಬರವಾಗಿ ಮಾರ್ಪಾಟಾಗಿರುತ್ತವೆ. ಹೀಗೆ ಮೇಲ್ಪದರದಲ್ಲಿ ಸಂಗ್ರಹವಾದಂತಹ ಎರೆಗೊಬ್ಬರವನ್ನು ಮಡಿಯಿಂದ ತೆಗೆಯಬೇಕು. ಗೊಬ್ಬರ ಸಂಗ್ರಹಿಸುವುದಕ್ಕಿಂತ ಮೂರು ದಿನ ಮೊದಲು ನೀರು ಹಾಕುವುದನ್ನು ನಿಲ್ಲಿಸಬೇಕು. ಹೀಗೆ ಮಾಡುವುದರಿಂದ ಮಡಿಯ ಮೇಲ್ಪದರವು ತೇವಾಂಶವನ್ನು ಕಳೆದುಕೊಂಡು, ಎರೆಹುಳುಗಳು ಮಡಿಯ ಕೆಳಭಾಗಕ್ಕೆ ಹೋಗುತ್ತವೆ. ತದನಂತರ ಎರೆಗೊಬ್ಬರವನ್ನು ಸಂಗ್ರಹಿಸಿ, ಸಾಣಿಗೆಗೆ ಹಾಕಿ ಅಥವಾ ಕೃಷಿ ವಿಶ್ವವಿದ್ಯಾಲಯ, ಧಾರವಾಡ ಅಭಿವೃದ್ಧಿ ಪಡಿಸಿದ ಯಾಂತ್ರಿಕ ಸಾಣಿಗೆಯಿಂದ ಸಾಣಿಸುವುದರಿಂದ ಕಡಿಮೆ ಅವಧಿಯಲ್ಲಿ ಹೆಚ್ಚಿನ ಎರೆಗೊಬ್ಬರವನ್ನು ಸಾಣಿಸುವುದಲ್ಲದೇ, ಈ ಕೆಲಸಕ್ಕೆ ತಗಲವು ಕಾರ್ಮಿಕರ ಮೇಲಿನ ಖರ್ಚನ್ನು ಕಡಿಮೆ ಮಾಡಬಹುದಾಗಿದೆ. ನಂತರ ಎರೆಗೊಬ್ಬರವನ್ನು ಚೀಲಗಳಲ್ಲಿ ತುಮಬಿಡಬೇಕು. ಒಂದು ಗುಂಟೆ ವಿಸ್ತೀರ್ಣದ ಮಡಿಗಳಿಂದ ಮೂರು ತಿಂಗಳಲ್ಲಿ ಸುಮಾರು 3 ರಿಂದ 5 ಟನ್ ತ್ಯಾಜ್ಯ ಉಪಯೋಗಿಸಿ 2-4 ಟನ್ ಎರೆಗೊಬ್ಬರವನ್ನು ಉತ್ಪಾದಿಸಬಹುದಾಗಿದೆ. ಅಂದರೆ ಒಂದು ವರ್ಷದಲ್ಲಿ ಒಂದು ಗುಂಟೆಯಲ್ಲಿ 8-16 ಟನ್ ಎರೆಗೊಬ್ಬರವನ್ನು ಉತ್ಪಾದಿಸಲಿಕ್ಕೆ ಸಾಧ್ಯವಿದೆ.

 

 Source: ಸುಧಾರಿತ ಬೇಸಾಯ ಕ್ರಮಗಳು ಸೆಪ್ಟೆಂಬರ್ – 2012 ,  ಕೃಷಿ ವಿಶ್ವವಿದ್ಯಾಲಯ, ಧಾರವಾಡ ಹಾಗೂ ಕೃಷಿ ವಿಶ್ವವಿದ್ಯಾಲಯ, ರಾಯಚೂರು

 

0
Your rating: None