ಕಡಲೆ ಗಿಡದ ಸಾಮಾನ್ಯ ಗುಣಲಕ್ಷಣಗಳು
ಕಡಲೆಯು ಸಾಂವತ್ಸರಿಕ (ವಾರ್ಷಿಕ) ಸಸ್ಯವಾಗಿದ್ದು, ಸುಮಾರು 30-70 ಸೆಂ.ಮಿ.
![]()
ಚಿತ್ರ-1: ದೇಸಿ ಕಾಬೂಲಿ ಕಡಲೆ ನಮೂನೆಗಳು
ಎತ್ತರವಿರುತ್ತದೆ. ದೃಢವಾದ, ಆಳವಾದ ಬೇರನ್ನು ಹೊಂದಿ, ಪಾರ್ಶ್ವದ ಬೇರುಗಳಲ್ಲಿ ಚಿಕ್ಕ ಗ್ರಂಥಿಗಳನ್ನು ಹೊಂದಿರುತ್ತದೆ. ಈ ಗ್ರಂಥಿಗಳಲ್ಲಿ ರೈಜೋಬಿಯಂ ಎಂಬ ಸೂಕ್ಷ್ಮಜೀವಿಗಳು ಇರುತ್ತವೆ. ಇವ್ರಗಳ ಮೂಲಕ ವಾಯುಮಂಡಲದ ಸಾರಜನಕವನ್ನು ಗಿಡಗಳಿಗೆ ಉಪಯೋಗವಾಗುವಂತಹ ರೀತಿಯಲ್ಲಿ ಶಕ್ತಗೊಳಿಸುತ್ತದೆ. ಈ ಗ್ರಂಥಿಗಳು ಸಸ್ಯ ಹುಟ್ಟಿದ 1 ತಿಂಗಳಿನ ನಂತರ 15 ಸೆಂ.ಮೀ. ಮೇಲ್ಮೈ ಭಾಗದಲ್ಲಿ ಕಾಣಿಸಿಕೊಳ್ಳುತ್ತವೆ. ಸಸ್ಯದ ಮೇಲ್ಮೈ ಭಾಗವ್ರ ಸಂಪೂರ್ಣವಾಗಿ ಸಣ್ಣ ಟ್ರೈಕೋಮ್ಗಳಿಂದ ಆವರಿಸಿದೆ. ಇವ್ರ ಆಕ್ಸಿಲಿಕ್, ಮ್ಯಾಲಿಕ್, ಸಿಟ್ರಿಕ್ ಆಮ್ಲಗಳನ್ನು ಸ್ರವಿಸುತ್ತವೆ. ಈ ಆಮ್ಲಗಳು ಗಿಡಗಳನ್ನು ರೋಗ ಮತ್ತು ಕೀಟಗಳಿಂದ ರಕ್ಷಿಸುತ್ತವೆ.
ಈ ಗಿಡಗಳು ಪ್ರಾಥಮಿಕ, ಮಾಧ್ಯಮಿಕ ಹಾಗೂ ತೃತೀಯ ಕಾಂಡಗಳನ್ನು ಹೊಂದಿವೆ. ಕೊಂಬೆಗಳ ಓಲಿಕೆಯ ಮೇಲೆ 5 ಬೆಳವಣಿಗೆ ರೀತಿಗಳಿವೆ - ಲಂಭ, ಅರೆ ಲಂಭ, ಹಬ್ಬು, ಅರೆ ಹಬ್ಬು, ಮತ್ತು ಹಬ್ಬು. ಲಂಭ ಮತ್ತು ಅರೆ ಲಂಭ ಗಿಡಗಳು ಯಂತ್ರ ಕೊಯ್ಲಿಗೆ ಅನುಕೂಲ.
Source: ICRISAT, Hyderabad & UAs, Dharwad
- Login to post comments
- 1237 reads

