ಗಂಡು ನೊಣ ಮತ್ತು ಅದರ ಗುಣ ಧರ್ಮಗಳು
ನೊಣದ ವಿವರ:
ಗಂಡು ನೊಣಗಳು ಗಾತ್ರದಲ್ಲಿ ಕೆಲಸಗಾರ ನೊಣಗಳಿಗಿಂತ ಸ್ವಲ್ಪ ಮಟ್ಟಿಗೆ ದಪ್ಪವಾಗಿದ್ದು ರಾಣಿನೊಣಕ್ಕಿಂತ ಸಣ್ಣದಾಗಿರುತ್ತವೆ.
ಇವು ಸಾಮಾನ್ಯವಾಗಿ ಕಪ್ಪು ಮಿಶ್ರಿತ ಕಂದು ಬಣ್ಣದಿಂದ ಕೂಡಿರುತ್ತವೆ.
ಒಂದು ಕುಟುಂಬದಲ್ಲಿ ಇದರ ಸಂಖ್ಯೆ: 800-900.
ಮುಖ್ಯ ಕಾರ್ಯ: ಹೊಸರಾಣಿಯನ್ನು ಸಂಪರ್ಕಿಸಿ ಗರ್ಭಧರಿಸುವಂತೆ ಮಾಡುವುದು.
ಇತರ ವಿಷೇಶಗಳು:
ಇವುಗಳಿಗೆ ಆಹಾರವನ್ನು ಸಂಗ್ರಹಿಸುವ ಚೈತನ್ಯವಿಲ್ಲದಿದ್ದರೂ ಸಹ ಹೆಚ್ಚು ಆಹಾರವನ್ನು ತಿನ್ನುತ್ತಿರುತ್ತವೆ. ಪ್ರತೀ ಗಂಡು ನೊಣಕ್ಕೆ 2 ರಿಂದ 5 ಕೆಲಸಗಾರ ನೊಣಗಳು ಸಂಗ್ರಹಿಸುವ ಆಹಾರ ಬೇಕಾಗುತ್ತದೆ.
ಲೈಂಗಿಕ ಸಂಪರ್ಕವಾದ ನಂತರ ಸಾಯುತ್ತವೆ.
ಲೈಂಗಿಕ ಸಂಪರ್ಕವಾಗದೆ ಉಳಿದವು ಗೂಡಿಗೆ ಹಿಂದಿರುಗುತ್ತವೆ.
ಹತ್ತು ದಿನಗಳಿಗಿಂತ ಕಡಿಮೆ ವಯಸ್ಸಿನ ಗಂಡು ನೊಣಗಳಿಗೆ ಲೈಂಗಿಕ ಕಾರ್ಯವನ್ನು ನಿರ್ವಹಿಸಲಾಗುವುದಿಲ್ಲ
ಇವು ಸಾಮಾನ್ಯವಾಗಿ ಸಂತಾನೋತ್ಪತ್ತಿಯನ್ನು ಮಾಡುವ ಅವಧಿಯಲ್ಲಿ ಮಾತ್ರ ಲೈಂಗಿಕ ಸಂಪರ್ಕಕ್ಕೋಸ್ಕರ ಉತ್ಪತ್ತಿಯಾಗುತ್ತವೆ.
ಲೈಂಗಿಕ ಸಂಪರ್ಕದ ಅವಧಿ ಮುಗಿದ ನಂತರ ಮತ್ತು ಆಹಾರದ ಕೊರತೆಯಾದಾಗ ಕೆಲಸಗಾರ ನೊಣಗಳು ಗಂಡು ನೊಣಗಳ ರೆಕ್ಕೆಗಳನ್ನು ಕಚ್ಚಿ ಗೂಡಿನಿಂದ ಹೊರಕ್ಕೆ ಎಳೆದು ಹಾಕುತ್ತವೆ.
Source: Dr. Gaveegowda
Prof. & Head
Department of Apiculture
UAS,GKVK,Bangalore-65
- Login to post comments
- 1706 reads
