Skip to main content

ಭತ್ತ ಬೀಜೋತ್ಪಾದನೆಯಲ್ಲಿ ಅನುಸರಿಸಬೇಕಾದ ಕ್ರಮಗಳು

ಭತ್ತ ಬೀಜೋತ್ಪಾದನೆಯಲ್ಲಿ ಅನುಸರಿಸಬೇಕಾದ ಕ್ರಮಗಳು

  • ಬೀಜೋತ್ಪಾದನೆಗೆ ತಮ್ಮ ವಾತಾವರಣಕ್ಕೆ ಸೂಕ್ತವಾದ ತಳಿಗಳನ್ನು ಆಯ್ಕೆ  ಮಾಡಿಕೊಕೊಳ್ಳುವ್ರದು.
  • ಮೂಲ ಬೀಜವನ್ನು ಅಂಗೀಕೃತ ಸಂಸ್ಥೆಯಿಂದ ಸೂಕ್ತ ರಶೀದಿ ಮೂಲಕ ಪಡೆದುಕೊಂಡಿರಬೇಕು.
  • ಪ್ರಮಾಣಿತ ಬೀಜೋತ್ಪಾದನೆಯನ್ನು ತೆಗೆದುಕೊಳ್ಳುವಾಗ ಸ್ಥಳೀಯ ಬೀಜ ಪ್ರಮಾಣನ   ಸಂಸ್ಥೆಯಿಂದ ಮೂಲ ತಪಾಸಣೆ ಮಾಡಿಸಿ ಬಿತ್ತನೆಗೆ ಉಪಯೋಗಿಸುವ್ರದು.
  • ಬಿತ್ತಿದ 30 ದಿನಗಳು ಅಧವಾ ನಾಟಿ ಮಾಡಿದ 15 ದಿನಗಳೊಳಗೆ ನಮೂನೆ-1 ರಲ್ಲಿ ಸೂಕ್ತ ಮಾಹಿತಿಗಳನ್ನು ನಮೂದಿಸಿ ಸ್ಥಳೀಯ ಬೀಜ ಪ್ರಮಾಣನ ಅಧಿಕಾರಿಗಳಿಗೆ ಸಲ್ಲಿಸವ್ರದು.
  • ನೇರ ತಳಿಗಳ ಬೀಜೋತ್ಪಾದನೆಯಲ್ಲಿ ಬೇರೆ ತಳಿಗಳ ತಾಕು ಗಳಿಂದ ಕನಿಷ್ಟ 3 ಮೀಟರ್‌ ಮತ್ತು ಸಂಕರಣ ಬೀಜೋತ್ಪಾದನೆಯಲ್ಲಿ 200 ಮೀಟರ್‌ (ಮೂಲಬೀಜ)100 ಮೀಟರ್‌ (ಪ್ರಮಾಣಿತ ಬೀಜ) ಗಳಷ್ಟು ಅಂತರವನ್ನು ಕಾಪಾಡಬೇಕು.
  • ಬೆಳೆಯ ವಿವಿಧ ಹಂತಗಳಲ್ಲಿ ಬೀಜೋತ್ಪಾದನಾ ತಾಕುಗಳಲ್ಲಿ ಕಂಡುಬರುವ ಬೆರೆಕೆ ಗಿಡಗಳನ್ನು ಚಾಚೂ ತಪ್ಪದೇ ಕಿತ್ತು ಹಾಕುವ್ರದು.
  • ಕಟಾವ್ರ ಮಾಡುವಾಗ ಕಟಾವ್ರ ಮಾಡುವ ಯಂತ್ರ ಚೆನ್ನಾಗಿ ಸ್ವಚ್ಚಗೊಳಿಸಿ, ಯಾವ್ರದೇ ಕಾರಣಕ್ಕೂ ಬೇರೆ ತಳಿಗಳ ಬೀಜಗಳು ಮಿಶ್ರವಾಗದಂತೆ ನೋಡಿಕೊಳ್ಳಬೇಕು

 

Source: ಡಾ. ಬಸವೇಗೌಡ ಮತ್ತು  ಶ್ರೀ.ಜಿ.ವೈ.ಲೋಕೇಶ್‌

             ಬೀಜ ಆಧಿಕಾರಿಗಳು  ಕೃಷಿ ವಿಶ್ವವಿದ್ಯಾಲಯ, ರಾಯಚೂರು ಮತ್ತು ಕೃಷಿ ಸಚಿವಾಲಯ ಭಾರತ ಸರ್ಕಾರ

0
Your rating: None