Skip to main content

ಭತ್ತದಲ್ಲಿ ಸೈನಿಕ ಹುಳುವಿನ ಕೀಟದ ವಿವರ ಮತ್ತು ಹಾನಿಯ ಲಕ್ಷಣಗಳು

ಭತ್ತದಲ್ಲಿ ಸೈನಿಕ ಹುಳುವಿನ ಕೀಟದ ವಿವರ ಮತ್ತು ಹಾನಿಯ ಲಕ್ಷಣಗಳು

  • ಈ  ಕೀಡೆಯು ವರ್ಷದ ಹೆಚ್ಚು ಮಳೆ ಬರುವ ಸಮಯದಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ಮರಿ ಹುಳುಗಳು ಗಿಡವನ್ನು ಸಂಪೂರ್ಣವಾಗಿ ತಿಂದು ಹಾಳು ಮಾಡುತ್ತದೆ
  • ಶೇ. 60  ರಷ್ಟು ಹಾನಿ ಉಂಟು ಮಾಡುತ್ತದೆ

ಕೀಟದ ವಿವರ :

  • ತತ್ತಿ: ಎಲೆಯ ಮತ್ತು ಕಾಂಡದ ಮೇಲೆ ಒಂದರ ಮೇಲೊಂದು ಸಾಲುಗಳಲ್ಲಿ ಇಡುತ್ತೆ.
  • ಮರಿ ಹುಳು: ಹಸಿರು ಬಣ್ಣದ ದೇಹ ಜೊತೆಗೆ ಉದ್ದನೆಯ ಗೆರೆಯು ಹೊಂದಿರುತ್ತೆ.
  • ಕೋಶಾವಸ್ಥೆ: 13 ರಿಂದ 20 ಮಿ.ಮೀ. ಕಪ್ಪು ಬಣ್ಣ ಹೊಂದಿರುತ್ತೆ.
  • ಪ್ರೌಢ: ಕೆಂಪು, ಕಂದು ಬಣ್ಣ ಹೊಂದಿರುತ್ತೆ.

    

ಮರಿ ಹುಳು                                        ಕೋಶಾವಸ್ಥೆ                                   ಅಪ್ಸರೆ ಕೀಟ

ಹಾನಿಯ ಲಕ್ಷಣಗಳು:
ಹಾನಿಯ ಹಂತ: ಮರಿಹುಳು
ರಾತ್ರಿಯ ಸಮಯದಲ್ಲಿ ಎಲೆಯನ್ನು ಮತ್ತು ತೆನೆಯ ದೇಟನ್ನು ತಿನ್ನುತ್ತದೆ.
ಹಗಲಿನಲ್ಲಿ ಸಸಿಗಳ ಬುಡದಲ್ಲಿ ಅವಿತಿರುತ್ತದೆ.

ಮರಿಹುಳು ಎಲೆಯನ್ನು ಕತ್ತರಿಸಿ ತಿಂದಿರುವುದು



0
Your rating: None