Skip to main content

ಮೆಣಸಿನಕಾಯಿ ಬೆಳೆಯ ಫೆಬ್ರುವರಿ ತಿಂಗಳ ಕಾರ್ಯ/ ಕಾಲ ಸೂಚಕ

 

ಮೆಣಸಿನಕಾಯಿ ಬೆಳೆಯ ಫೆಬ್ರುವರಿ ತಿಂಗಳ ಕಾರ್ಯ/ ಕಾಲ ಸೂಚಕ

                                   

ಕೀಟ / ರೋಗದ ಹೆಸರು

ಹಾನಿಯ ಲಕ್ಷಣಗಳು

ಕೀಟ / ರೋಗ ಗುರುತಿಸುವಿಕೆ

ಹತೋಟಿ ಕ್ರಮಗಳು

ಹಣ್ಣುಕೊರಕ,

ಹೆಲಿಕೋವೆರ್ಪಾ ಆರ್ಮಿಜೆರ ಮತ್ತು

ಸ್ಪೋಡೋಪ್ಟೆರ ಲಿಟ್ಟೂರ

ಹಣ್ಣಿನ ತೊಟ್ಟಿನ ಕೆಳಭಾಗದಲ್ಲಿ ರಂಧ್ರಗಳು ಕಂಡು ಬರುತ್ತವೆ

ಹಾನಿಗೀಡಾದ ಹಣ್ಣು ಕೊಳೆತು ಕೆಳಗೆ ಉದುರುತ್ತದೆ

 

100 ಎಲ್.ಇ  ಹೆಚ್.ಎ ಎನ್.ಪಿ.ವಿ ಅಥವಾ

100 ಎಲ್.ಇ  ಎಸ್.ಲ್ ಎನ್.ಪಿ.ವಿ ಅಥವಾ

0.20 ಮಿ.ಲೀ ಸ್ಪಿನೋಸಾಡ್ ಸಿಂಪಡಿಸಬೇಕು.

ಮೈಟ್ ನುಶಿ

ಫಾಲೀಫ್ಯಾಗೋಟಾರ್ಸೋನಾಮ್ಸ್ ಲ್ಯಾಟ್ಸ್

 

ನುಶಿಯ ಬಾಧಿತ ಎಲೆಗಳು ದೇಟು ಉದ್ದವಾಗಿ, ಬಿರುಸಾಗಿ ಕಪ್ಪು ಹಸಿರು ಬಣ್ಣಕ್ಕೆ ತಿರುಗಿ ಒಳಗಡೆ ಮುದುಡಿಕೊಳ್ಳುತ್ತವೆ.

ಗಿಡಗಳ ಬೆಳವಣಿಗೆ ಕುಂಠಿತಗೊಳ್ಳುತ್ತೆ.

 

 

2.0 ಮಿ.ಲೀ. ಫೆನಜಕ್ವಿನ್ 10 ಇ.ಸಿ. ಅಥವಾ 0.3 ಮಿ. ಲೀ. ವರ್ಟಿಮೆಕ್ 1.9 ಇ.ಸಿ. ಅಥವಾ 2.50 ಮಿ.ಲೀ. ಡೈಕೊಫಾಲ್ 18.5 ಇ.ಸಿ. ಅಥವಾ  3 ಗ್ರಾಂ ನೀರಿನಲ್ಲಿ ಕರಗುವ ಗಂಧಕ  ಸಿಂಪಡಿಸಬೇಕು.

 

 ಚಿಬ್ಬು ರೋಗ

ಹಣ್ಣುಗಳ ಮೇಲೆ ವೃತ್ತಾಕಾರದ, ತಗ್ಗಾದ ಕಪ್ಪನೆಯ ಚುಕ್ಕೆಗಳನ್ನು ಕಾಣಬಹುದು

 

0.2 ಗ್ರಾಂ ಕ್ಯಾಪಟ್ಫಾಲ್ ಸಿಂಪಡಿಸಿದ ನಂತರ  0.25 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಮತ್ತು 0.1 ಗ್ರಾಂ   ಕಾರ್ಬೆಂಡೈಜಿಮ್

 ಬೂದಿ ರೋಗ

ಮೊದಲ ಹಂತದಲ್ಲಿ ಎಲೆಗಳ ಮೇಲೆ ಬೂದಿ ಬಣ್ಣದ ಮಚ್ಛೆಗಳು ಕಂಡು ಬಂದು ನಂತರ ಬಿಳಿ ಬಣ್ಣದ ಶಿಲೀಂದ್ರದ ಬೆಳವಣಿಗೆ ಎಲೆಯನ್ನು ಸಂಪೂರ್ಣವಾಗಿ ಆವರಿಸುತ್ತದೆ

 

1 ಮಿ.ಲೀ ಡೈಯನೊಕ್ಯಾಪ್ ಅಥವಾ 2 ಗ್ರಾಂ ನೀರಿನಲ್ಲಿ ಕರಗುವ ಗಂಧಕ ಒಂದು ಲೀ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು

ಹೂ ಬಿಡುವ ಮುಂಚೆ ಪ್ರತಿ ಎಕರೆಗೆ 8-10 ಕೆಜಿ ಗಂಧಕವನ್ನು ಧೂಳಿಕರಿಸಬೇಕು

                                       

0
Your rating: None