Skip to main content

ಸಾಗುವಳಿ ಕ್ರಮದಲ್ಲಿ ದಾಳಿಂಬೆಯ ದುಂಡಾಣು ಅಂಗಮಾರಿ ರೋಗದ ನಿರ್ವಹಣೆ

ಸಾಗುವಳಿ ಕ್ರಮದಲ್ಲಿ ದುಂಡಾಣು ಅಂಗಮಾರಿ ರೋಗದ ನಿರ್ವಹಣೆ

 ನಾಟಿ ಪೂರ್ವದಲ್ಲಿ ಅನುಸರಿಸಬೇಕಾದ ಕ್ರಮಗಳು

  • ರೋಗ ರಹಿತ ಸಸಿಗಳನ್ನು ನಾಟಿಗೆ ಬಳಸಬೇಕು.
  • ಶಿಫಾರಸ್ಸು ಮಾಡಿದ ಪೋಷಕಾಂಶಗಳ ಜೊತೆಗೆ ಕೊಟ್ಟಿಗೆ ಗೊಬ್ಬರ ಅಥವಾ ಎರೆ ಹುಳುವಿನ ಗೊಬ್ಬರವನ್ನು ಹೆಚ್ಚಾಗಿ ಬಳಸುವದರಿಂದ ಗಿಡದಲ್ಲಿ ರೋಗ ನಿರೋಧಕತೆ ಹೆಚ್ಚಾಗಿ ರೋಗದ ತೀವ್ರತೆಯನ್ನು ಕಡಿಮೆ ಗೊಳಿಸಬಹುದು.

 ಚಾಟನಿ ಪೂರ್ವ ಮತ್ತು ನಂತರದಲ್ಲಿ ಅನುಸರಿಸಬೇಕಾದ ಕ್ರಮಗಳು

  • ದಾಳಿಂಬೆ ತೋಟವನ್ನು ಸ್ವಚ್ಚವಾಗಿಡುವ್ರದು, ರೋಗ ಪೀಡಿತ ಎಲೆ, ಕಾಂಡ ಮತ್ತು ಕಾಯಿಗಳನ್ನು ಕಿತ್ತು ಸುಡಬೇಕು. ಇದರಿಂದ ರೋಗ ಪ್ರಸಾರವನ್ನು ತಡೆಗಟ್ಟಬಹುದು.
  • ದಾಳಿಂಬೆ ಬೆಳೆಯನ್ನು ಹಸ್ತ ಬಹಾರ್‌ (ಸೆಪ್ಟೆಂಬರ್‌ - ಅಕ್ಟೋಬರ್‌)ನಲ್ಲಿ ಚಾಟಿನಿ ಮಾಡಬೇಕು.

  • ಹಣ್ಣುಗಳನ್ನು ತಗೆದ ನಂತರ ಗಿಡಗಳಿಗೆ ಕನಿಷ್ಠ 6 ತಿಂಗಳು ವಿಶ್ರಾಂತಿ ಕೊಡಬೇಕು.
0
Your rating: None