ಮೆಣಸಿನಕಾಯಿ ಬೆಳೆಗೆ ಬರುವ ಸಸಿಕೊಳೆ ರೋಗ
ಹಾನಿಯ ಲಕ್ಷಣಗಳು:
1. ಬೀಜಗಳು ಮೊಳಕೆಯೊಡೆಯುವ ಸಮಯದಲ್ಲಿ ಬಾಧೆಗೊಳಗಾಗಿ ಅನೇಕ ಬಾರಿ ಸಸಿಗಳು ಮಣ್ಣಿನಿಂದ ಹೊರಬರದೆ ಸಾಯುತ್ತವೆ.
2. ಮೊಳಕೆಯೊಡೆದು ಹೊರ ಬಂದ ಸಸಿಗಳು ಗುಂಪು ಗುಂಪಾಗಿ ಅಲ್ಲಲ್ಲಿ ಸಾಯುತ್ತವೆ.
3. ರೋಗಕ್ಕೆ ತುತ್ತಾದ ಸಸಿಗಳಲ್ಲಿ ಭೂಮಿಗೆ ಹೊಂದಿಕೊಂಡಿರುವ ಕಾಂಡದ ಭಾಗದ ಮೇಲೆ ಕಂದು ಬಣ್ಣದ ಮಚ್ಚೆಗಳು ಕಾಣಿಸಿಕೊಂಡು, ನಂತರ ಕಪ್ಪು ವರ್ಣಕ್ಕೆ ತಿರುಗಿ, ಕೊನೆಗೆ ಸಸಿಗಳು ಅಲ್ಲೇ ಕೊಳೆತು ಸಾಯುತ್ತವೆ.
4. ನಾಟಿ ಮಾಡಿದ ಗಿಡಗಳಿಗೂ ಸಹ ರೋಗದ ಸೋಂಕು ಆವರಿಸಿ, ಕಾಂಡ ಮತ್ತು ಬೇರು ಕೊಳೆಯುತ್ತವೆ.
ಸಸಿ ಮಡಿಯಲ್ಲಿ ಸಸಿಗಳು ಗುಂಪಾಗಿ ಸಾಯುವ ಲಕ್ಷಣ ಬೀಜಗಳು ಮೊಳಕೆಯೊಡೆದು ಹೊರಗೆ ಬರದೆ ಸಾಯುವ ಲಕ್ಷಣ
ಅನೂಕೂಲಕರ ವಾತಾವರಣ:
ಈ ರೋಗದ ಬಾಧೆಯು ಹೆಚ್ಚಾಗಿ ಮಳೆಗಾಲದ ಸಮಯದಲ್ಲಿ ಸಸಿ ಮಡಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಮಣ್ಣಿನಲ್ಲಿಯ ಅಧಿಕ ತೇವಾಂಶ ಈ ರೋಗದ ತೀಕ್ಷ್ಣತೆಗೆ ಕಾರಣವಾಗುತ್ತದೆ. ಈ ರೋಗವ್ರ ಮಣ್ಣು ಮತ್ತು ನೀರಿನಿಂದ ಹರಡುತ್ತದೆ.
- Login to post comments
- 688 reads
