ತೊಗರಿ ಬೆಳೆಯಲ್ಲಿ ಕಾಯಿ ಕೊರಕದ ಸಮಗ್ರ ಕೀಟ ನಿರ್ವಹಣೆ
ಬೇಸಾಯ ಕ್ರಮಗಳು/ಸಾಗುವಳಿ ಕ್ರಮಗಳು:
- ಮಾಗಿ ಉಳುಮೆ ಕೋಶವನ್ನು ನಾಶಪಡಿಸಲು
- ಏಕಕಾಲದಲ್ಲಿ ಸರಿಯಾದ ಸಮಯದಲ್ಲಿ ಬಿತ್ತನೆ ಮಾಡುವುದು.
- ಸಾಧ್ಯವಿದ್ದಲ್ಲಿ ಬೆಳೆ ಪರಿವರ್ತನೆ ಮಾಡುವುದು.
- ಪಕ್ಷಿ ಆಶ್ರಯಕ್ಕಾಗಿ ಜೋಳ, ಸಜ್ಜೆ, ಪುಂಡಿ ಅಥವಾ ಎಳ್ಳನ್ನು ಬೆಳೆಯುವುದು.
- ಬೇಗ ಮಾಗುವ ತಳಿಗಳನ್ನು ಬೆಳೆಯುವುದು.
- ಅಂತರ ಬೆಳೆಗಳನ್ನು ಬೆಳೆಯುವುದು.
- ಮರಿ ಹುಳು ದೊಡ್ಡವಾಗಿದ್ದಲ್ಲಿ ಕೈಯಿಂದ ಆರಿಸಿ ನಾಶಪಡಿಸಬೇಕು.
- ಮೋಹಕ ಬಳೆಗಳು (ಪ್ರತಿಎಕರೆಗೆ) 8-10, 30 ಅಡಿಗೆ ಒಂದು ಬಲೆ.
- 15 ದಿನಕ್ಕೊಮ್ಮೆ ಮೋಹಕ (ಲ್ಯೂರ್) ವಸ್ತುವನ್ನು ಬದಲಾಯಿಸಬೇಕು.
- ಪತಂಗಗಳ ಸಂಖ್ಯೆ 5ಕ್ಕಿಂತ ಹೆಚ್ಚಿದಲ್ಲಿ ಮೊಟ್ಟೆ ಮತ್ತು ಕೀಟಗಳ ಸಮೀಕ್ಷೆ ಮಾಡಬೇಕು.

ಮಾಗಿ ಉಳುಮೆ

ಗಿಡಅಲ್ಲಾಡಿಸಿ ಕೀಡೆ ಉದುರಿಸುವುದು

ಪಕ್ಷಿ ಆಕರ್ಶಕಗಳು

ಮೊಹಕ ಬಲೆಗಳು
ಕೀಟನಾಶಕಗಳ ಬಳಕೆ: 2 ತತ್ತಿ ಪ್ರತಿ ಗಿಡಕ್ಕೆ
ಅಥವಾ
1 ಹುಳು ಪ್ರತಿ ಗಿಡಕ್ಕೆ
ಮೊದಲ ಸಿಂಪರಣೆಗೆ (ಪ್ರತಿ ಎಕರೆಗೆ)
-2 ಮಿ.ಲೀ. ಪ್ರೋಪೇನೋಪಾಸ್ 50 ಇ.ಸಿ.
-ಥೈಯೋಡಿಕಾರ್ಬ 75 ಡಬ್ಲು.ಪಿ
ಎರಡನೆ ಸಿಂಪರಣೆಗೆ
-2 ಮಿ.ಲೀ. ಶೇ 5 ಬೇವಿನ ಕಷಾಯ
ಮೂರನೆ ಸಿಂಪರಣೆಗೆ
ಎಚ್.ಎ. ಎನ್.ಪಿ.ವಿ. - 100 ಎಲ್.ಇ.
+
0.1.1. ಬೋರಿಕ್ ಆಮ್ಲ
+
0.5% ಬೆಲ್ಲ
ಎಚ್.ಎ. ಎನ್.ಪಿ.ವಿ.ನಂಜಾಣು

ನಂಜಾಣು ಭಾದಿತ ಮರಿ ಹುಳು ಜೋತು ಬಿದ್ದಿರುವುದು
ನಾಲ್ಕನೆಯ ಸಿಂಪರಣೆಗೆ
ರಾಸಾಯನಿಕ ಕ್ರಮಗಳು:
2 ಮಿ.ಲೀ. ಕ್ವಿನಾಲ್ಫಾಸ್ 25 ಇ.ಸಿ.
2.5 ಮಿ.ಲೀ. ಕ್ಲೋರ್ಪೈರಿಫಾಸ್ 20 ಇ.ಸಿ.
1 ಗ್ರಾಂ ಆಸಿಫೇರ್ 75 ಎಸ್.ಪಿ.
0.3 ಮಿ.ಲೀ. ಇಂಡಾಕ್ಸಿಕಾರ್ಬರಿಲ್ 14.5 ಎಸ್.ಸಿ
0.12 ಮಿ.ಲೀ. ಸ್ಟೈನೋಸಾಡ್ 45 ಎಸ್.ಸಿ.
ಇದರಲ್ಲಿ ಯಾವುದಾದರೂ ಒಂದನ್ನು ಒಮದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಪ್ರತಿ ಎಕರೆಗೆ 400 ಲೀಟರ್ ಸಿಂಪರಣ ದ್ರವಣ ಬೇಕು.
- Login to post comments
- 2853 reads
