ಬೀಟ್ರೂಟ್
ಬೀಟ್ರೂಟ್ ತರಕಾರಿಯನ್ನು ಸಾಮಾನ್ಯವಾಗಿ ದೊಡ್ಡ ಪಟ್ಟಣಗಳ ಸುತ್ತಮುತ್ತ ಬೆಳೆಯಲಾಗುತ್ತದೆ. ಇದು ಸಿ ಅನ್ನಾಂಗ ಹಾಗೂ ಕೆಲವು ಪ್ರಮುಖ ಖನಿಜಗಳನ್ನು ಒದಗಿಸುತ್ತದೆ. ತಂಪು ವಾತಾವರಣ ಈ ಬೆಳೆಗೆ ಸೂಕ್ತ. ಕಡಿಮೆ ಉಷ್ಣ ಹವೆಯಿರುವ ವಾತಾವರಣದಲ್ಲೂ ಕೂಡ ಬೆಳೆಯಬಹುದು. ಒಳ್ಳೆಯ ಗುಣಮಟ್ಟದ ಗಡ್ಡೆಗಳನ್ನು ಚಳಿಗಾಲದ ಬೆಳೆಯಿಂದಲೇ ಪಡೆಯಬಹುದು.
ಕಾಲ
ಚಳಿಗಾಲದ ಬೆಳೆಯನ್ನು ಅಕ್ಟೋಬರ್-ನವೆಂಬರ್ ಹಾಗೂ ಮಳೆಗಾಲದ ಬೆಳೆಯನ್ನು ಜೂನ್-ಜುಲೈ ತಿಂಗಳುಗಳಲ್ಲಿ ಪ್ರಾರಂಭಿಸಬಹುದು.
ಮಣ್ಣು
ಚೆನ್ನಾಗಿ ನೀರು ಬಸಿದು ಹೋಗುವಂತಹ ಆಳವಾದ ಗೋಡು ಮಣ್ಣು ಈ ಬೆಳೆಗೆ ಸೂಕ್ತ.
ತಳಿಗಳು
ಕ್ರಿಮ್ಸನ್ ಗ್ಲೋಬ್ ಮತ್ತು ಡೆಟ್ರಾಯಿಟ್ ಡಾರ್ಕ್ ರೆಡ್ ತಳಿಗಳು ಸೂಕ್ತವಾದವು.
ಬೇಸಾಯ ಸಾಮಗ್ರಿಗಳು
ಕ್ರ.ಸಂ ವಿವರಗಳು ಪ್ರತಿ ಹೆಕ್ಟೇರಿಗೆ
1. ಬೀಜ 3.75 ಕಿ.ಗ್ರಾಂ
ಬಿತ್ತನೆ:
ಭೂಮಿಯನ್ನು 2-3 ಸಲ ಚೆನ್ನಾಗಿ ಉಳುಮೆ ಮಾಡಿ ಹೆಂಟೆ ಒಡೆದು ಸಿದ್ಧಪಡಿಸಿ, ಬೋದು ಮತ್ತು ಹರಿಗಳನ್ನು 30 ಸೆಂ.ಮೀ. ಅಂತರದಲ್ಲಿ ತಯಾರಿಸಬೇಕು. ಪೂರ್ತಿ ಪ್ರಮಾಣದ ಕೊಟ್ಟಿಗೆ ಗೊಬ್ಬರ ಹಾಗೂ ಶಿಫಾರಸ್ಸು ಮಾಡಿದ ಶೇ. 50 ರ ಸಾರಜನಕ ಹಾಗೂ ಪೂರ್ತಿ ಪ್ರಮಾಣದ ರಂಜಕ ಹಾಗೂ ಪೊಟ್ಯಾಷ್ಯುಕ್ತ ರಾಸಾಯನಿಕ ಗೊಬ್ಬರಗಳನ್ನು ಮಣ್ಣಿನಲ್ಲಿ ಬೆರೆಸಿ 22.5 ಸೆಂ.ಮೀ. ಅಂತರದಲ್ಲಿ ಬೀಜಗಳನ್ನು ಊರಬೇಕು. ಬಿತ್ತುವುದಕ್ಕಿಂತ ಮೊದಲು ನೀರು ಹಾಯಿಸಬೇಕು. ಬಿತ್ತನೆಯಾದ 4 ವಾರಗಳ ನಂತರ ಪ್ರತಿ ಜಾಗಕ್ಕೆ ಒಂದು ಸಸಿಯನ್ನು ಬಿಟ್ಟು ಉಳಿದವುಗಳನ್ನು ತೆಗೆಯಬೇಕು.
1. ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ 20 ಟನ್ 2. ರಾಸಾಯನಿಕ ಗೊಬ್ಬರಗಳು ಸಾರಜನಕ 63 ಕಿ.ಗ್ರಾಂ ರಂಜಕ 100 ಕಿ.ಗ್ರಾಂ ಪೊಟ್ಯಾಷ್ 63 ಕಿ.ಗ್ರಾಂ
ನೀರಾವರಿ
ಮಣ್ಣು ಮತ್ತು ಹವಾಗುಣವನ್ನನುಸರಿಸಿ 4 ರಿಂದ 6 ದಿನಗಳಿಗೊಮ್ಮೆ ನಿಯಮಿತವಾಗಿ ನೀರು ಹಾಯಿಸಬೇಕು.
ಸಸ್ಯ ಸಂರಕ್ಷಣೆ
ರೋಗಗಳು: ಎಲೆಚುಕ್ಕೆ ರೋಗ.
ಹತೋಟಿ ವಿಧಾನ
ಎಲೆ ಚುಕ್ಕೆ ರೋಗದ ಹತೋಟಿಗೆ 2 ಮಿ.ಲೀ. ಮೆನಜಾನ್ ಜೊತೆಗೆ 2 ಗ್ರಾಂ ಮ್ಯಾಂಕೊಜೆಬ್ ಅಥವಾ ಕ್ಲೋರೋಥಲೋನಿಲ್ ಅಥವಾ ಜೈನೆಬ್ 1 ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಿ.
ಕೀಟಗಳು: ಹೇನು ಮತ್ತು ಎಲೆ ತಿನ್ನುವ ಹುಳು.
1. ಹೇನು ನಿಯಂತ್ರಣಕ್ಕಾಗಿ 2 ಮಿ.ಲೀ. ಆಕ್ಸಿಡೆಮಿಟಾನ್ ಮೀಥೈಲ್ ಅಥವಾ 0.5 ಮಿ.ಲೀ. ಫಾಸ್ಫಾಮಿಡಾನ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿ.
2. ಎಲೆ ತಿನ್ನುವ ಹುಳು ನಿಯಂತ್ರಣಕ್ಕಾಗಿ 2 ಮಿ.ಲೀ. ಮೆಲಾಥಿಯಾನ್ ಅಥವಾ 4 ಗ್ರಾಂ. ಕಾರ್ಬಾರಿಲ್ 1 ಲೀ. ನೀರಿನಲ್ಲಿ ಕರಗಿಸಿ ಬೆಳೆಗೆ ಸಿಂಪರಿಸಬೇಕು. ಪ್ರತಿ ಹೆಕ್ಟೇರಿಗೆ 540 ಲೀ. ಸಿಂಪರಣಾ ದ್ರಾವಣ ಬೇಕಾಗುತ್ತದೆ.
ಕೊಯ್ಲು
ಬಿತ್ತನೆಯಾದ 3 ತಿಂಗಳಿಗೆ ಬೆಳೆ ಕೊಯ್ಲಿಗೆ ಸಿದ್ಧವಾಗುತ್ತದೆ.
ಇಳುವರಿ
ಪ್ರತಿ ಹೆಕ್ಟೇರಿಗೆ 17,000 ದಿಂದ 20,000 ಕಿ.ಗ್ರಾಂ ಗಡ್ಡೆಗಳ ಇಳುವರಿ ಪಡೆಯಬಹುದು.
Download POP AppView POP website
KVK-Netagropedia images New in agropedia Multilingual Editor