Skip to main content

ಕಡಲೆಯಲ್ಲಿ ಬೀಜ ಸಂಸ್ಕರಣೆ ಮತ್ತು ಸಂಗ್ರಹಣೆ

ಕಡಲೆಯಲ್ಲಿ  ಬೀಜ ಸಂಸ್ಕರಣೆ   ಮತ್ತು   ಸಂಗ್ರಹಣೆ

ಸಂಸ್ಕರಣೆ    

ಇದು ಕೊಯ್ಲು ಮಾಡಿ ಮಾರಾಟ ಮಾಡುವವರೆಗಿನ ಎಲ್ಲಾ ಹಂತಗಳನ್ನು ಒಳಗೊಂಡಿದೆ. ಒಣಗಿದ ಬೀಜಗಳಲ್ಲಿರುವ ಬೇಡವಾದ ವಸ್ತುಗಳಾದಂತಹ ಸಸ್ಯ ಅವಶೇಷಗಳು, ಮಣ್ಣಿನ ಕಣಗಳು, ಕಲ್ಲುಗಳು, ಕಳೆಯ ಬೀಜಗಳು, ಬೇರೆ ಬೆಳೆಯ ಬೀಜಗಳು ಒಡೆದ ಬೀಜಗಳು ಮತ್ತು ಪೆಟ್ಟುಬಿದ್ದಂತಹ ಬೀಜಗಳನ್ನು ಬೇರ್ಪಡಿಸಬೇಕು.

ಸಂಗ್ರಹಣೆ

ಸಂಗ್ರಹಿಸುವ ಮೊದಲು ಬೀಜಗಳನ್ನು ಸರಿಯಾಗಿ ಒಣಗಿಸಬೇಕು ಅಲ್ಪಾವಧಿ ಸಂಗ್ರಹಣೆ (8 ರಿಂಗಳ ವರೆಗೆ) ಶಿಫಾರಸ್ಸು ಮಾಡಿದ ತೇವಾಂಶ ಶೇ. 10-12 % ಒಣಗಿಸಿದ ಬೀಜಗಳನ್ನು ಪಾಲಿಥೀನ್‌ನಿಂದ ಮಾಡಿದ ಗೋಣಿ ಚೀಲಗಳಲ್ಲಿ ಅಥವಾ ಲೋಹಗಳೀಂದ/ಮಣ್ಣಿನಿಂದ ತಯಾರಿಸಿದ ಸಾಮಗ್ರಿಗಳಲ್ಲಿ ಸುರಕ್ಷಿತವಾಗಿ ಸಂಗ್ರಹಿಸಿಡಬೇಕು. ಚೀಲಗಳನ್ನು ಹೆಗ್ಗಣಗಳ/ ಇಲಿಗಳ ಕಾಟ ಇಲ್ಲದಿರುವ ಕೋಣೆಯಲ್ಲಿ ಗೊಡೆಗೆ ತಾಕದಂತೆ ಹಲಗೆ ಮೇಲಿಡಬೇಕು.

ಬ್ರುಚಿಡ್ಸ್‌ (ಬುರಬುರಿ) ಎಂಬ ಕೀಟಗಳು ಕಡಲೆ ಮತ್ತು ಬೇರೆ ದ್ವಿದಳ ಧಾನ್ಯಗಳ ಮೇಲೆ ಗಂಭೀರವಾದಂತಹ ಕೀಟ ಎಂದು ಪರಿಗಣಿಸಲಾಗಿದೆ. ಇವ್ರ ಬೀಜಗಳ ಮೇಲೆ ಬಿಳಿ ಮೊಟ್ಟೆಗಳನ್ನು ಇಡುತ್ತವೆ ಮತ್ತು ಕೀಡೆಗಳು ಬೀಜಗಳನ್ನು ಕೊರೆದು ಒಳಗೆ ಸೇರುತ್ತವೆ. ಪ್ರೌಢಾವಸ್ಥೆ ತಲುಪಿದ ನಂತರ ಹುಳುವ್ರ/ ಕೀಟವ್ರ ಬೀಜವನ್ನು ತೂತು ಮಾಡಿ ಹೊರಬರುತ್ತವೆ. ಇಂತಹ ಬಾಧೆಗೊಳಗಾದ ಬೀಜಗಳನ್ನು ಬಿತ್ತಲು/ ಊಳಲು ಬಳಸಲು ಯೋಗ್ಯವಿರುವದಿಲ್ಲ. ಈ ಬ್ರುಚಿಡ್ಸಗಳ ನಿಯಂತ್ರಣಕ್ಕಾಗಿ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಸ್ವಲ್ಪ ಪ್ರಮಾಣದ ಬೀಜವನ್ನು ಸಾಂಪ್ರಾದಾಯಿಕವಾಗಿ ಬೂದಿ, ಒಣಗಿದ ಬೇವಿನ ಎಲೆಗಳು, ಕಡಲೆ ಇಲ್ಲವೇ ಗೋಧಿ ಹೊಟ್ಟಿನಿಂದ ಸಂರಕ್ಷಿಸಬಹುದು. ಬಹಳ ಪ್ರಮಾಣದ ಬೀಜಗಳನ್ನು ಸಂರಕ್ಷಿಸಿಡಲು, ಸಂಗ್ರಹಣೆ ಕೊಠಡಿ ಅಥವಾ ದಾಸ್ತಾನುಗಳನ್ನು ಇಥೀಲಿನ್‌ᆲಡೈᆲಬ್ರೋಮೈಡ್‌ (ಇಡಿಬಿ) ಮತ್ತು ಫಾಸ್ಪೈನ್‌ಗಳ ಹೊಗೆಯಿಂದ ಶುದ್ಧಿಕರಿಸಬೇಕು. ಹೊಗೆಯ ಶುದ್ಧಿಕರಣದಿಂದ ಕೀಟವನ್ನು ಎಲ್ಲಾ ಹಂತಗಳಲ್ಲಿ (ಮೊಟ್ಟೆ, ಕೀಡೆ ಮತ್ತು ಪ್ಯೂಪೆ) ತಡೆಗಟ್ಟಬಹುದು. ಇದರಿಂದ ಬೇರೆ ತರಹದ ಸಂಗ್ರಹಣೆ ಕೀಟಗಳನ್ನು ಮತ್ತು ಹೆಗ್ಗಣಗಳನ್ನು ಸಹ ತಡೆಗಟ್ಟಬಹುದು.


Source: ICRISAT, Hyderabad & UAS, Dharwad
0
Your rating: None