ಕಡಲೆ ಬೀಜೋತ್ಪಾದನೆಯ ತಾಂತ್ರಿಕತೆ
ಬೀಜೋತ್ಪಾದನೆಗಾಗಿ ಬೆಳೆದಂತಹ ಪೈರಿನಲ್ಲಿ ಭೌತಿಕ ಪರಿಶುದ್ಧತೆ ಮತ್ತು ಅನುವಂಶಿಕ ಪರಿಶುದ್ಧತೆ ಕಾಪಾಡುವಲ್ಲಿ ಹೆಚ್ಚಿನ ಶ್ರಮವಹಿಸ ಬೇಕಾಗುತ್ತದೆ.
ಕಡಲೆಯನ್ನು ಹಿಂಗಾರಿನಲ್ಲಿ ಅಥವಾ ಮಳೆಗಾಲದ ನಂತರದ ಹಂಗಾಮಿನಲ್ಲಿ ಪಾಳುಬಿದ್ದ ಭೂಮಿಯಲ್ಲಿ ಬೆಳೆಯುತ್ತಾರೆ. ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಬಿತ್ತನೆ ಮಾಡುತ್ತಾರೆ. ತಡವಾಗಿ ಬಿತ್ತನೆ ಮಾಡಿದರೆ, ಕಾಯಿ ತುಂಬಿಕೊಳ್ಳುವ ಸಮಯದಲ್ಲಿ ಹೆಚ್ಚಿನ ಉಷ್ಣತೆಯ ಒತ್ತಡ ಮತ್ತು ತೇವಾಂಶದ ಕೊರತೆ ಉಂಟಾಗಿ ಕಡಿಮೆ ಇಳುವರಿ ಬರುತ್ತದೆ ಮತ್ತು ಬೀಜದ ಗುಣಮಟ್ಟವ್ರ ಕಡಿಮೆಯಾಗುತ್ತದೆ.
ಪ್ರತ್ಯೇಕತಾ ಅಂತರ:
ಬೀಜದ ಭೌತಿಕ ಶುದ್ಧತೆ ಕಾಪಾಡುವ್ರದಕ್ಕೋಸ್ಕರ ಅದೇ ಬೆಳೆಯ ಇತರೇ ಹೊಲಗಳಿಂದ ಅಥವಾ ಮಲಿನಗೊಳಿಸುವ ಇತರೇ ಬೆಳೆಗಳಿಂದ ಕನಿಷ್ಠ ಅಂತರದಲ್ಲಿ ಬೀಜೋತ್ಪಾದನೆ ಕ್ಷೇತ್ರವಿರಬೇಕು. ಹಾಗು ಈ ಅಂತರ ಭಾರತದಲ್ಲಿ ಮೂಲ ಬೀಜಕ್ಕೆ 10 ಮೀಟರ್ ಮತ್ತು ಪ್ರಮಾಣಿಕೃತ ಬೀಜಕ್ಕೆ 5 ಮೀಟರ್ ಇರಬೇಕು.
ಭೂಮಿಸಿದ್ಧತೆ: ನೆಲದ ಮೇಲ್ಮೈ ದಟ್ಟವಾಗಿದ್ದು ಗಾಳಿಯಾಡದಂತೆ ಇದ್ದರೆ ಬೀಜ ಮೊಳಕೆಗೆ, ಸಸ್ಯ ಹೊರಬರುವದಕ್ಕೆ ಮತ್ತು ಬೆಳವಣಿಗೆಗೆ ತೊಂದರೆಯಾಗುತ್ತದೆ. ಆದ್ದರಿಂದ ಹೊಲದಲ್ಲಿ ಸಡಿಲವಾದ ಮಣ್ಣು ಮತ್ತು ಉತ್ತಮ ನಾಲೆಗಳ ವ್ಯವಸ್ಥೆಗಳಿರುಬೇಕು. ಹಿಂದಿನ ಫೈರಿನ ಮುರಿದು ಬಿದ್ದ ರಾಶಿ ಅಥವಾ ಫೈರನ್ನು ಕತ್ತರಿಸಿದ ಬಳಿಕ ತಳದಲ್ಲಿ ಉಳಿದ ತುಂಡುಗಳಿದ್ದರೆ ಅವ್ರಗಳನ್ನು ತೆಗೆದುಹಾಕಬೇಕು. ಕಾರಣ ಇವ್ರಗಳಲ್ಲಿ ಬೇರು ಕೊಳೆಯುವ ಹಾಗು ಸೊರಗು ರೋಗದ ಕೀಟಾನುಗಳಿರುತ್ತವೆ.
ಬಿತ್ತನೆ: ಸಂರಕ್ಷಿಸಿದಂತಹ ಮಣ್ಣಿನ ತೇವಾಂಶದಲ್ಲಿಯೇ ಬಿತ್ತನೆಮಾಡಬೇಕು. ಈ ತೇವಾಂಶ ಕಡಿಮೆ ಇದ್ದಲ್ಲಿ ಸರಿಯಾಗಿ ಮೊಳಕೆಯಾಗಲು ನೀರನ್ನು ಹಾಯಿಸಬೇಕು. ಆಳವಾದ ಕಪ್ಪು ಮಣ್ಣಿನಲ್ಲಿ ಕಡಲೆ ಬಿತ್ತಿದ ಕೂಡಲೇ ನೀರನ್ನು ಹಾಯಿಸಬಾರದು. ಕಾಬೂಲಿ ಕಡಲೆ ದೇಸಿ ಕಡಲೆಗಿಂತ ತೆಳುವಾದ ಬೀಜ ಪದರು ಇರುವ ಕಾರಣ ಬೀಜ ಕೊಳೆಯುವಿಕೆ ಮತ್ತು ಸಸ್ಯ ಸಾಯುವ ರೋಗ ಹೆಚ್ಚಾಗುತ್ತದೆ.
ಬಿತ್ತನೆಯಆಳ : ತೇವಾಂಶವಿರುವ ಮಣ್ಣಿನ ಸಂಪರ್ಕಕ್ಕೆ ಬರಲು ಬೀಜವನ್ನು 5-8 ಸೆಂ.ಮೀ. ಆಳದಲ್ಲಿ ಬಿತ್ತಬೇಕು. ಇದು ಬೀಜ ಮೊಳೆಯಲು ಮತ್ತು ಸಸ್ಯ ಹೊರಬರಲು ಅನುಕೂಲವಾಗುತ್ತದೆ.
ಅಂತರ: ಸಾಲು ಪದ್ಧತಿ ಬಿತ್ತನೆಯು ಬೀಜೋತ್ಪಾದನೆಗೆ ಅನುಕೂಲಕರವಾಇಗದೆ. ಇದು ಎಡೆ ಹೊಡೆಯಲು, ಹೊಲದ ಸಮೀಕ್ಷೆ ಮಾಡಲು, ಇತರೇ ಬೆಳೆಯ ಗಿಡಗಳನ್ನು ತೆಗೆದು ಹಾಕಲು ಅನುಕೂಲಕರ, 30 ಸೆಂ.ಮೀ. ಸಾಲುಗಳ ಅಂತರ ಮತ್ತು 10 ಸೆಂ.ಮೀ. ಗಇಡಗಳ ನಡುವಿನ ಅಂತರವಿದ್ದರೆ, ಪ್ರತಿ ಚದರ ಮೀಟರ್‌ಗೆ 33 ಗಿಡಗಳು ಬರುತ್ತವೆ (ಪ್ರತಿ ಹೆ. ಸಸ್ಯಗಳ ಸಂಖ್ಯೆ 3,30,000) ಕಾಬೂಲಿ ಕಡಲೆ ಮತ್ತು ನೀರಾವರಿ ಬೆಳೆಗಳಲ್ಲಿ ಗಿಡಗಳು ಅಗಲವಾಗಿ ಬೆಳೆಯುವದರಿಂದ ಸಾಲುಗಳ ನಡುವಿನ ಅಂತರ ಹೆಚ್ಚಾಗಿರಬೇಕು. (45-60 ಸೆಂ.ಮೀ.)
ಬೀಜಪ್ರಮಾಣ : ಇದು ತಳಿಯಿಂದ ತಳಿಗೆ ವ್ಯತ್ಯಾಸವಾಗುತ್ತದೆ. ಮೊದಲ ಬಾರಿ ಹೊಸ ತಳಿಯ ಬೀಜ ಪ್ರಮಾಣ ಹೆಚ್ಚಿಸಲು, ಸರಿಯಾದ ಪ್ರಮಾಣದಲ್ಲಿ ಬಿತ್ತನೆ ಬೀಝದ ಬಳಕೆ ಅವಶ್ಯಕ.
ಬೀಜದ ಗಾತ್ರ (100- ಬೀಜದ ತೂಕ)
ಸಣ್ಣಗಾತ್ರದಬೀಜ (20 ಗ್ರಾಂ ಕ್ಕಿಂತ ಕಡಿಮೆ) ಉದಾ: ಜೆ.ಜಿ.-315: 50-60 ಕೆ.ಜಿ/ಹೆ.
ಮಧ್ಯಮಗಾತ್ರದಬೀಜ (20-30 ಗ್ರಾಂ) ಉದಾ: ಜೆ.ಜಿ-11, ಜೆ.ಜಿ.-130, ಜಾಕಿ- 9218: 60-90 ಕೆ.ಜಿ./ಹೆ.
ದೊಡ್ಡಗಾತ್ರದಬೀಜ (30-40 ಗ್ರಾಂ) ಉದಾ: ಬಿ.ಜಿ.ಡಿ.- 103, ಕಾಕ-2, ವಿಹಾರ : 90-120 ಕೆ.ಜಿ/ಹೆ.
ಅತಿದೊಡ್ಡ (40 ಗ್ರಾಂ. ಕ್ಕಿಂತ ಹೆಚ್ಚು) ಉದಾ: ಭೀಮಾ, ಐಸಿಸಿವಿ- 95334: 120-150 ಕೆ.ಜಿ/ ಹೆ.
Source: ICRISAT, Hyderabad & UAs, Dharwad
- Login to post comments
- 839 reads
