ಕೆಲಸಗಾರ ನೊಣಗಳು ಮತ್ತು ಅದರ ಗುಣಧರ್ಮಗಳು
ತಮ್ಮ ಪೀಳಿಗೆಗಳ ಏಳಿಗೆಗೆ ಎಚ್ಚರವಹಿಸುವುದರಿಂದ ತಮ್ಮ ಮಾತೃತ್ವದ ಲಕ್ಷಣವನ್ನುಉಳಿಸಿಕೊಂಡಿರುವವು ಎಂದು ತಿಳಿಯುತ್ತದೆ.
ಮುಖ್ಯ ಕಾರ್ಯ:
ಇವುಗಳಿಗೆ ಯಾವಾಗಲೂ ಕುಟುಂಬದ ಕೆಲಸದ್ದೊಂದೇ ಚಿಂತೆ.
ಆಹಾರಾನ್ವೇಷಣೆ, ಎರಿಯನ್ನು ಕಟ್ಟುವುದು, ಪರಸ್ಪರ ಸಹಕಾರದಿಂದ ಆಹಾರವನ್ನು ಸಂಗ್ರಹಿಸುವುದು.
ಹೆಚ್ಚಿನ ಸಂಖ್ಯೆಯ ಮರಿಹುಳುಗಳಿಗೆ ಉಣಿಸುವುದು, ರಾಜಶಾಹಿರಸ ಉತ್ಪಾದಿಸುವುದು, ರಾಣಿ ಹುಳುಗಳಿಗೆ ಆಹಾರವನ್ನು ಉಣಿಸುವುದು.
ಗೂಡಿಗೆ ಬೇಕಾಗುವ ಶಾಖವನ್ನು ಒದಗಿಸುವುದು, ಗೂಡಿನಲ್ಲಿ ಎಲ್ಲಾ ನೊಣಗಳಿಗೆ ಸ್ಥಳಾವಕಾಶವನ್ನು ಒದಗಿಸುವುದು ಮತ್ತು ಗೂಡನ್ನು ತಮ್ಮ ಶತ್ರು ಪೀಡೆಗಳಿಂದ ರಕ್ಷಿಸುವುದು.
ಗೂಡನ್ನು ಸ್ವಚ್ಚಗೊಳಿಸುವುದು, ಜೇನು ತುಪ್ಪದಲ್ಲಿ ಹೆಚ್ಚಾಗಿರುವಂತಹ ತೇವಾಂಶವನ್ನು ಕಡಿಮೆ ಮಾಡುವುದು, ಜೇನು ತುಪ್ಪವನ್ನು ಶೇಖರಿಸುವ ಕೆಲಸಗಳನ್ನು ನಿರ್ವಹಿಸುತ್ತವೆ.
ಮೂರು ವಾರಗಳ ನಂತರ ಈ ನೊಣಗಳು ಗೂಡಿನ ಹೊರಗಡೆ ಮಾಡಬಹುದಾದ ಕೆಲಸಗಳನ್ನು ನಿರ್ವಹಿಸುತ್ತವೆ.
ಸಂಖ್ಯೆ: ಒಂದು ಜೇನು ಕುಟುಂಬದಲ್ಲಿ 10 ಸಾವಿರದಿಂದ 80 ಸಾವಿರದವರೆಗೆ, ಕೆಲವು ಬಾರಿ ಇದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸಗಾರ ನೊಣಗಳು ಇರುತ್ತವೆ.
ಇತರ ವಿಷೇಶಗಳು :
ಕೆಲಸಗಾರ ನೊಣಗಳು ಹುಟ್ಟಿದ 8-10 ದಿನಗಳ ನಂತರ ಹೊರಗಡೆ ಹಾರುವುದನ್ನು ಕಲಿಯುತ್ತವೆ.
ವಾತಾವರಣದಲ್ಲಿ ಒಣ ಹವೆಯಿಂದ ಕೂಡಿದ ಕಾಲದಲ್ಲಿ ಕೆಲಸಗಾರ ನೊಣಗಳು ಗುಂಪು ಗುಂಪಾಗಿ ಗೂಡಿನಿಂದ ಹೊರಬಂದು ಗೂಡಿನ ಮುಂದೆ ಸ್ವಲ್ಪ ಹೊತ್ತು ರೆಕ್ಕೆ ಯಾಡಿಸುತ್ತವೆ.
ಈ ರೀತಿ ಮಾಡುವುದರಿಂದ ಹಾರುವುದನ್ನು ಕಲಿಯುವುದು ಮಾತ್ರವಲ್ಲದೆ ತಮ್ಮ ಗೂಡಿನ ಜಾಗ ಮತ್ತು ಸ್ಥಿತಿಯನ್ನೂ ಸಹ ಗುರುತಿಸಬಲ್ಲವು.
ಇವು ತಮ್ಮ ಗೂಡಿನ ಸ್ಥಳವನ್ನು ಗುರಿತಿಸುವ ಸ್ಥಿತಿಗೆ ಬಂದ ನಂತರ ಮಕರಂದ, ಪರಾಗ ಮತ್ತು ನೀರನ್ನು ಸಂಗ್ರಹಿಸಲು ಪ್ರಾರಂಭಿಸುತ್ತವೆ.
ಮಕರಂದವನ್ನು ತಮ್ಮ ಹೊಟ್ಟೆಯಲ್ಲಿಟ್ಟುಕೊಂಡು, ಪರಾಗವನ್ನು ತಮ್ಮ ಹಿಂದಿನ ಕಾಲುಗಳಲ್ಲಿರುವ ಪರಾಗದ ಬುಟ್ಟಿಯಲ್ಲಿ ತುಂಬಿಕೊಂಡು ತರುತ್ತವೆ.
ಕೆಲಸಗಾರ ನೊಣದ ಮುಳ್ಳಿನ ಕೊಂಡಿಯು ವಿಷದ ಚೀಲದೊಂದಿಗೆ ಹೊರಬರುವುದರಿಂದ ಕೆಲಸಗಾರ ನೊಣವು ಕೊಂಡಿಯಿಂದ ಚುಚ್ಚಿದ ನಂತರ ಸಾವನ್ನಪ್ಪುತ್ತದೆ.
ತಮ್ಮ ಕುಟುಂಬಕ್ಕಾಗಿ ಪ್ರಾಣತ್ಯಾಗವನ್ನೇ ಮಾಡುತ್ತವೆ.
ಕೆಲಸಗಾರ ನೊಣಗಳು ಸುಮಾರು 5-6 ವಾರಗಳವರೆಗೆ ಬದುಕುತ್ತವೆ. (ಚಳಿಗಾಲದಲ್ಲಿ ಚುರುಕಾಗಿ ಕೆಲಸ ಮಾಡದೇ ಇರುವುದರಿಂದ ಇವು 4 ರಿಂದ 5 ತಿಂಗಳವರೆಗೆ ಬದುಕಬಲ್ಲವು) .
Source: Dr. Gaveegowda
Prof. & Head
Department of Apiculture
UAS,GKVK,Bangalore-65
- Login to post comments
- 1394 reads
