Skip to main content

ಜೇನು ನೊಣಗಳ ಕುಟುಂಬ ಮತ್ತು ಅದರ ರಚನೆ

ಜೇನು ನೊಣಗಳ ಕುಟುಂಬ ಮತ್ತು ಅದರ ರಚನೆ


ಜೇನುನೊಣಗಳು ಸಂಘ ಜೀವಿಗಳು. 
ಗೂಡುಗಳನ್ನು ಕಟ್ಟಿಕೊಂಡು ಸಹಕಾರ ಬಾಳ್ವೆಯಲ್ಲಿ ಅನ್ಯೋನ್ಯತೆಯಿಂದ ಜೀವನ ನಡೆಸುತ್ತವೆ. 
ಇವು ಶಿಸ್ತು, ಸಹಕಾರ, ಸ್ವಾವಲಂಬನೆಯಿಂದ ಸಾಮಾಜಿಕ ಜೀವನ ನಡೆಸುವ ಕೀಟಗಳು. 
ಆಹಾರ ಶೇಖರಿಸುವುದು, ಜೇನು ಉತ್ಪಾದಿಸುವುದು ಹಾಗೂ ಗೂಡಿನ ರಕ್ಷಣೆ ಮುಂತಾದ ಕುತೂಹಲ ಕೆರಳಿಸುವ ಗುಣಗಳನ್ನು ನೋಡಬಹುದು. 
ಒಂದು ಜೇನು ಗೂಡಿನಲ್ಲಿ ರಾಣಿ, ಕೆಲಸಗಾರ ನೊಣಗಳು ಮತ್ತು ಗಂಡು ನೊಣಗಳೆಂಬ ಮೂರು ಜಾತಿಗಳಿರುತ್ತವೆ. 
ಒಂದು ಸಾಧಾರಣ ಜೇನು ಸಂಸಾರದಲ್ಲಿ ಸುಮಾರು 2000 ದಿಂದ 40,000 ಜೇನುನೊಣಗಳಿದ್ದು ಅವುಗಳಲ್ಲಿ ಒಂದೇ ಒಂದು ರಾಣಿ ನೊಣ ಮತ್ತು ಕೆಲವು ನೂರು ಗಂಡು ನೊಣಗಳಿದ್ದು ಉಳಿದ ಎಲ್ಲವೂ ಕೆಲಸಗಾರ ನೊಣಗಳಾಗಿರುತ್ತವೆ

Source: Dr. Gaveegowda
             Prof. & Head
             Department of Apiculture
             UAS,GKVK,Bangalore-65

 

 

 

0
Your rating: None

Please note that this is the opinion of the author and is Not Certified by ICAR or any of its authorised agents.