ಭಾರತದಲ್ಲಿ ಬೀಜ ವ್ಯವಸ್ಥೆ
ಬೆಳೆಗಳ ಉತ್ಪಾದನೆಯಲ್ಲಿ ಹೆಚ್ಚಿನ ಇಳುವರಿ ಪಡೆಯುವಲ್ಲಿ ಉತ್ತಮ ಗುಣಮಟ್ಟವ್ರಳ್ಳ ಶುದ್ಧವಾದ ಹೆಚ್ಚಿನ ಇಳುವರಿ ಕೊಡುವಂತಹ ತಳಿಗಳ ಪಾತ್ರ ಅತೀ ಪ್ರಮುಖವಾದದ್ದು. ದ್ವಿದಳ ಧಾನ್ಯಗಳಲ್ಲಿ ಉತ್ತಮ ತಳಿಗಳ ಬೀಜಗಳು ಸಕಾಲದಲ್ಲಿ ಸರಿಯಾದ ಪ್ರಮಾಣದಲ್ಲಿ ದೊರಕದ ಕಾರಣ ರೈತರು ಉತ್ತಮ ತಳಿಗಳನ್ನು ಹೆಚ್ಚಾಗಿ ಉಪಯೋಗಿಸುತ್ತಿಲ್ಲವೆಂದು ತಿಳಿದು ಬಂದಿದೆ.
ರೈತರಿಗೆ ಉತ್ತಮ ಗುಣಮಟ್ಟವ್ರಳ್ಳ ಬೀಜಗಳನ್ನು ಪೂರೈಸಲು ಭಾರತ ಸರ್ಕಾರವ್ರ 1963 ರಲ್ಲಿ ರಾಷ್ಟೕಯ ಬೀಝ ನಿಗಮವನ್ನು (NSC) ಸ್ಥಾಪಿಸಿತು. ಬೆಳೆಯುತ್ತಿರುವ ಬೀಝ ಕೇಂದ್ರಗಳನ್ನು ನಿಗದಿಪಡಿಸಲು ಬೀಜ ಕಾಯ್ದೆಯನ್ನು 1966 ರಲ್ಲಿ ಪರಿಚಿಯಿಸಿತು. ಈ ಕಾಯ್ದೆಯ ಕರಾರುಗಳ ಪ್ರಕಾರ ಬೀಜಗಳು ನಿಗದಿಪಡಿಸಿದ ಭೌತಿಕ, ಅನುವಂಶಿಕತೆಯ ಶುದ್ಧತೆ (ಜೆನಿಟಿಕ್ ಪ್ಯೂರಿಟಿ) ಹಾಗೂ ನಿಶ್ಚಿತವಾದ ಮೊಳಕೆ ಪ್ರಮಾಣವನ್ನು ಹೊಂದಿರುವ್ರದಲ್ಲದೇ, ಇವ್ರಗಳನ್ನು ಪ್ರಮಾಣಿಕರಿಸಬೇಕು. ರಾಷ್ಟೕಯ ಬೀಜ ನೀತಿ 2002ರ ಪ್ರಕಾರ ಸಾರ್ವಜನಿಕ ಮತ್ತು ಖಾಸಗಿ ಕಂಪನಿಗಳು ಉತ್ತಮ ಸಂಬಂಧವನ್ನು ಹೊಂದಿರಬೇಕು. ಸಸ್ಯ ತಳಿಗಳು ಹಾಗೂ ರೈತರ ಹಕ್ಕುಗಳ ಸಂರಕ್ಷಣೆ (PPV and FR) ಕಾಯ್ದೆ 2005, ಇದು ರೈತರ ಮತ್ತು ಸಸ್ಯ ತಳಿ ಸಂವರ್ಧಕರ ಅಧಿಕಾರಗಳನ್ನು ಸಂರಕ್ಷಸುವಲ್ಲಿ ಸಹಾಯ ಮಾಡಿ, ಹೊಸ ತಳಿಗಳನ್ನು ಅಭಿವೃದ್ಧಿ ಪಡಿಸುವದರಲ್ಲಿ ಪ್ರಮುಖ ಪಾತ್ರವಹಿಸಿದೆ.
ಬೀಜವರ್ಗಗಳು
ಭಾರತದಲ್ಲಿ ಈ ಕೆಳಗಿನ 4 ಬೀಜ ವರ್ಗಗಳನ್ನು ಗುರುತಿಸಲ್ಪಟ್ಟಿದೆ.
1. ತಾಯಿಬೀಜ (ನ್ಯೂಕ್ಲಿಯಸ್ ಸೀಡ) : ತಳಿ ಸಂವರ್ಧಕರ/ಉತ್ಪಾದಕರ ಬಳಿ ಇರುವ ಮೂಲ ಬೀಜವಂಶದಿಂದ ಇದು ಉತ್ಪಾದಿಸಲ್ಪಡುತ್ತದೆ. ಉತ್ತಮವಾದ ಗಿಡಗಳನ್ನು ಆರಿಸಿ, ಆಯ್ದ ಗಿಡಗಳನ್ನು ಸಂತತಿಗಳನ್ನಾಗಿ ಬೆಳೆಸಬೇಕು. ವಿಭಿನ್ನವಾಗಿ ಕಂಡ ಗಿಡಗಳನ್ನು ತೆಗೆದು ಹಾಕಿ ಉಳಿದ ಸಂತತಿಗಳನ್ನು ಒಟ್ಟಾಗಿ ಕೊಯ್ದು ಬೀಜಗಳನ್ನು ಕೂಡಿಸಬೇಕು.
2. ತಳಿ ಸಂವರ್ಧಕಬೀಜ (ಬ್ರೀಡರ್‌ಸೀಡ) : ಸಸ್ಯ ತಳಿ ಸಂವರ್ಧಕರ (ಬ್ರೀಡರ್‌ಗಳ) ಮೇಲ್ವಿಚಾರಣೆಯಲ್ಲಿ ಬ್ರೀಡರ್ ತಾಯಿ ಬೀಜಗಳನ್ನು (ನ್ಯೂಕ್ಲಿಯಸ್ ಸೀಡನ್ನು) ಉಪಯೋಗಿಸಿಕೊಂಡು ಉತ್ಪಾದಿಸುತ್ತಾರೆ. ಇದಕ್ಕೆ ಬಂಗಾರ ಹಳದಿ ಬಣ್ಣದ ಗುರುತಿನ ಚೀಟಿಯನ್ನು (ಗೋಲ್ಡನ್ ಯೆಲ್ಲೋ ಟ್ಯಾಗ್) ಲಗತ್ತಿಸಿರುತ್ತಾರೆ, ಇದರಿಂದ ಮೂಲ ಬೀಜ (ಫೌಡೇಶನ್ ಸೀಡ್) ತಯಾರಿಸುತ್ತಾರೆ. ಇದರ ಉತ್ಪಾದನೆಯ ಸಂಪೂರ್ಣ ಜವಾಬ್ದಾರಿಯನ್ನು ಐಸಿಎಆರ್ ಸಂಸ್ಥೆಗಳು (Mಅಂಖ) ಹಾಗೂ ರಾಜ್ಯ ಕೃಷಿ ವಿಶ್ವವಿದ್ಯಾಲಯ (ಖಂಗ) ಗಳು ಹೊಂದಿರುತ್ತವೆ.
ರಾಷ್ೖಮಟ್ಟದಲ್ಲಿ ಬಿಡುಗಡೆಯಾದ ತಳಿಗಳಿಗೆ ಕೃಷಿ ಇಲಾಖೆಯ ಬೀಜ ವಿಭಾಗ, ಕೃಷಿ ಮಂತ್ರಾಲಯ, ಭಾರತ ಸರ್ಕಾರ, ರಾಜ್ಯ ಸರ್ಕಾರ, ರಾಷ್ಟೕಯ ಮತ್ತು ರಾಜ್ಯ ಬೀಜ ಸಂಸ್ಥೆಗಳು ಕೋರಿಕೆ ಪತ್ರವನ್ನು ಕಳುಹಿಸಬೇಕು. ರಾಜ್ಯಾದ್ಯಂತ ಬಿಡುಗಡೆಯಾದ ತಳಿಗಳಿಗೆ ಕೃಷಿ ವಿಶ್ವವಿದ್ಯಾಲಯಗಳೂ ಜೂನ್ 15 ರ ಒಳಗೆ ಕೋರಿಕೆ ಪತ್ರವನ್ನು ಕಳುಹಿಸಬೇಕು. ಖಾಸಗಿ ಬೀಜ ಕಂಪನಿಗಳು ಎನ್‌ಎಸ್‌ಎಐ ಮೂಲಕ ಬೀಜ ವಿಭಾಗ, ಡಿಎಸಿ ಗೆ ಇಂಡೆಂಟ್ ಕಳುಹಿಸಬೇಕು.
3. ಮೂಲಬೀಜ (ಫೌಂಡೇಶನ್‌ಸೀಡ): ತಳಿವರ್ಧಕರ ಮೇಲ್ವಿಚಾರಣೆ ಮತ್ತು ಬೀಜ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸೀಡ ಕ್ವಾಲಿಟಿ ಕಂಟ್ರೋಲ್ ಎಜೆನ್ಸಿ) ಯವರ ಹತೋಟಿಯಲ್ಲಿ ತಳಿವರ್ಧಕ ಬೀಜ ಅಥವಾ ಮೊದಲನೆಯ ಹಂತದ ಮೂಲ ಬೀಜಗಳಿಂದ ಮೂಲಬೀಜವನ್ನು ಉತ್ಪಾದಿಸುತ್ತಾರೆ. ನೇರವಾಗಿ ತಳಿವರ್ಧಕ ಬೀಝ ಉಪಯೋಗಿಸಿಕೊಂಡು ತಯಾರಿಸಿದ ಬೀಜಗಳನ್ನು ಮೂಲ ಬೀಜ ಹಂತ (ಎಫ್ ಎಸ್ ಸ್ಟೇಜ್) 1 ಎನ್ನುತ್ತಾರೆ.
ಮೂಲ ಬೀಜ ಹಂತ (ಎಫ್ ಎಸ್ ಸ್ಟೇಜ) 1 ರಿಂದ ಉತ್ಪಾದಿಸಿದ ಬೀಝಗಳನ್ನು ಎರಡನೇ ಹಂತದ ಮೂಲ ಬೀಜ (ಎಫ್‌ಎಸ್ ಸ್ಟೇಜ 2) ಎನ್ನುತ್ತಾರೆ. ಎರಡನೇ ಹಂತದ ಮೂಲ ಬೀಜದಿಂದ ಮತ್ತೆ ಮುಂದೆ ಮೂಲ ಬೀಜಗಳನ್ನು ಉತ್ಪಾದಿಸಲಾಗುವದಿಲ್ಲ. ಈ ಎರಡು ವರ್ಗದ ಬೀಜಗಳಿಗೆ ಒಂದೇ ರೀತಿಯ ಬೀಝ ಪ್ರಮಾಣೀಕೃತ ನಿಬಂಧನೆಗಳು ಇರುತ್ತವೆ ಬಿಳಿ ಬಣ್ಣದ ಗುರುತಿನ ಚೀಟಿಯನ್ನು ಲಗತ್ತಿಸಲಾಗಿರುತ್ತದೆ.
4. ಪ್ರಮಾಣೀಕೃತಬೀಜ (ಸರ್ಟಿಫೈಡ್ ಸೀಡ):
ಮೂಲ ಬೀಜದಿಂದ ಇದನ್ನು ಉತ್ಪಾದಿಸಲಾಗುತ್ತದೆ. ಭಾರತ ಸರಕಾರ, ಬೀಝ ಕಾಯ್ದೆ 1966 ವಿಭಾಗ 8 ರ ಪ್ರಕಾರ ಈ ಬೀಜವನ್ನು ಕರ್ನಾಟಕ ರಾಜ್ಯ ಬೀಜ ಪ್ರಮಾಣದ ಸಂಸ್ಥೆಯವರು ಪ್ರಮಾಣೀಕರಿಸುತ್ತಾರೆ. ಈ ಬೀಜಗಳನ್ನು ಮತ್ತೇ ಪ್ರಮಾಣಿಕೃತ ಬೀಜೋತ್ಪಾದನೆಗೆ ಅಥವಾ ರೈತರು ಬೇಸಾಯಕ್ಕೆ ಉಪಯೋಗಿಸಿಕೊಳ್ಳಬಹುದು. ಪ್ರಮಾಣಿಕೃತ ಬೀಝ ಉತ್ಪಾದನೆಯನ್ನು ರಾಷ್ಟೕಯ ಮತ್ತು ರಾಜ್ಯ ಬೀಜ ನಿಗಮದವರು ಕೈಗೊಳ್ಳುತ್ತಾರೆ. ಹಾಗಿದ್ದರೂ ಕೂಡಾ, ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು, ಸಾರ್ವಜನಿಕ ಮತ್ತು ಖಾಸಗಿ ವಲಯದ ಬೀಝ ಉದ್ಯಮಿಗಳು, ನೊಂದಾಯಿಸಿದ ಬೀಝ ಬೆಳೆಗಾರರು, ಅಧಿಕೃತಪಡಿಸಿದ ರೈತರು, ಸಂಸ್ಥೆಗಳು ಪ್ರಮಾಣಿಕೃತ ಬೀಝವನ್ನು ಮೂಲ ಬೀಜದಿಂದ ಉತ್ಪಾದಿಸಬಹುದು. ಪ್ರಮಾಣಿಕೃತ ಬೀಜದ ಗುರುತಿಗಾಗಿ ನೀಲಿ ಬಣ್ಣದ ಗುರುತಿನ ಚೀಟಿಯನ್ನು ಲಗತ್ತಿಸಿರುತ್ತಾರೆ.
ನಿಜಬೀಜ (TL Seeds)
ಉನ್ನತ ಬೇಸಾಯ ಕ್ರಮಗಳನ್ನು ಅಳವಡಿಸಿಕೊಂಡ, ನುರಿತ/ಅನುಭವಿ ಬೀಜ ಬೆಳೆಗಾರರು ಬಿಡುಗಡೆಯಾದಂತಹ ತಳಿಗಳ ಬೀಜವನ್ನು ಉತ್ಪಾದಿಸುತ್ತಾರೆ. ಈ ಬೀಜವನ್ನು ಅನುವಂಶಿಕ ಪರಿಶುದ್ಧತೆ ಹೆಚ್ಚಾಗಿದ್ದು ಇವ್ರಗಳನ್ನು ರೈತರಿಗೆ ನಿಜ ಬೀಜ ಎಂಬ ಹೆಸರಿನಲ್ಲಿ ಮಾರಾಟ ಮಾಡುತ್ತಾರೆ. ಅದೇ ರೀತಿ, ಖಾಸಗಿ ಬೀಜ ಕಂಪನಿಗಳು ಕೂಡಾ ಅಧಿಕ ಇಳುವರಿ ಕೊಡುವಂತಹ ತಳಿಗಳನ್ನು ಬೆಳೆದು ಅದಕ್ಕೆ ತಮ್ಮದೆ ಆದಂತಹ ಮುದ್ರೆಯನ್ನು ಹಾಕಿ ಮಾರಾಟ ಮಾಡುತ್ತಾರೆ. ಕಡಲೆ ಮತ್ತು ಇತರೇ ದ್ವಿದಳ ಧಾನ್ಯಗಳಲ್ಲಿ ಬೀಝ ಪ್ರಮಾಣ ಹೆಚ್ಚಾಗಿರುವದಿಲ್ಲ. ಇಂತಹ ಧಾನ್ಯಗಳಲ್ಲಿ ಅಸಂಪ್ರದಾಯಿಕ ಬೀಜ ಬೆಳೆಗಾರರು ಉನ್ನತ ಗುಣಮಟ್ಟದ ಬೀಜಗಳನ್ನು ರೈತರಿಗೆ ಕೊಡುತ್ತಾರೆ.
ಅನೌಪಚಾರಿಕ ಬೀಜ ವ್ಯವಸ್ಥೆ
- ಬೆಳೆಯುತ್ತಿರುವ ದೇಶಗಳಲ್ಲಿ, ಸ್ಥಳೀಯ ಸುಧಾರಿತ ತಳಿಗಳ ಮತ್ತು ಬಿಡುಗಡೆಯಾದಂತಹ ತಳಿಗಳ ಬೀಜವನ್ನು ಪೂರೈಸುವಲ್ಲಿ ಈ ವ್ಯವಸ್ಥೆಯು ಪ್ರಮುಖ ಪಾತ್ರವಹಿಸುತ್ತದೆ. ಈ ವ್ಯವಸ್ಥೆಯಲ್ಲಿ ಸರಕಾರೆತರ ಸಂಸ್ಥೆಗಳು, ಸಾಮೂಹಿಕ ಸಮುದಾಯ, ರೈತರ ಸಹಕಾರಿ ಸಂಸ್ಥೆ ಮತ್ತು ಬೀಜ ಬೆಳೆಗಾರರ ಸಂಘಗಳು ಬೀಜವನ್ನು ಉತ್ಪಾದಿಸುತ್ತಾರೆ.
- ಬೀಜೋತ್ಪಾದನೆ ಹಾಗೂ ಬೀಜಗಳ ಸಂಗ್ರಹಣಾ ಸಮಯದಲ್ಲಿ ಬೀಜಗಳ ಕಲಬೆರೆಕೆ ಉಂಟಾಗಬಹುದು, ಆದ್ದರಿಂದ ಪ್ರತಿ 3-4 ವರ್ಷಕ್ಕೊಮ್ಮೆ ಮೂಲ ಬೀಜಗಳನ್ನು ಉಪಯೋಗಿಸಿಕೊಂಡ ಬೀಜೋತ್ಪಾದನೆ ಮಾಡಬೇಕು.
Source: ICRISAT, Hyderabad & UAs, Dharwad
- ಬೀಜ ಪ್ರಮಾಣಿಕರಿಸುವ ವಿಧಾನದಲ್ಲಿ ಯಾವ್ರದೇ ಬೇರೆ ಸಂಸ್ಥೆಯ ಪಾತ್ರ ಇಲ್ಲದಿರುವ ಕಾರಣ, ಬೀಜದ ಗುಣಮಟ್ಟ ಕಾಪಾಡಿಕೊಳ್ಳಲು ಉತ್ತಮ ಬೀಜೋತ್ಪಾದನೆ ಕ್ರಮಗಳನ್ನು ಅಳವಡಿಸಿಕೊಳ್ಳುವದು ಅತ್ಯವಶ್ಯಕ.
- Login to post comments
- 679 reads
