| 1. |
ಕಾಯಿ ಕೊರಕ (ಹೆಲಿಕೋವರ್ಪಾ) |
ಪ್ರಾರಂಭಿಕ ಹಂತದಲ್ಲಿ ಕೀಡೆಯು ಎಲೆಯ ಹಸಿರು ಭಾಗವನ್ನು ಕೆರೆದು ತಿನ್ನುತ್ತದೆ. ನಂತರ ಎಲೆ ಮೊಗ್ಗು ಮತ್ತು ಕಾಯಿಗಳನ್ನು ತಿನ್ನುತ್ತದೆ. ಹೆಣ್ಣು ಪತಂಗವ್ರ ತತ್ತಿಗಳನ್ನು ಎಲೆಯ ಮೇಲೆ ಇಡುತ್ತವೆ. ಬಲಿತ ಹುಳುಗಳು ದೇಹದ ಅರ್ಧ ಭಾಗವನ್ನು ಕಾಯಿಯೊಳಗೆ ತೂರಿಸಿ ತಿನ್ನುವ್ರದು ಸಾಮಾನ್ಯ ಮೊಗ್ಗು ಮತ್ತು ಹೂಗಳನ್ನು ಕೊರೆಯುವ್ರದರಿಂದ ಅವ್ರ ಉದುರಿ ಕಾಯಿ ಹಿಡಿಯುವ್ರದು ಕಡಿಮೆಯಾಗುತ್ತದೆ. ಈ ಕೀಡೆಯು ಸರಾಸರಿ ಶೇ. 40 ರಿಂದ 50 ರಷ್ಟು ಹಾನಿ ಮಾಡುತ್ತದೆ. ಬಾಧಿತ ಕಾಯಿಗಳಲ್ಲಿ ರಂಧ್ರವನ್ನು ಕಾಣಬಹುದು. |
ಕಾಯಿ ಕೊರೆಯುವ ಹುಳುವಿನ ಹತೋಟಿಗಾಗಿ ಬೆಳೆ ಶೇ. ೫೦ ರಷ್ಟು ಹೂಬಿಟ್ಟಾಗ ಮತ್ತು ಕಾಯಿ ಬಳಿಯುವ ಹಂತದಲ್ಲಿದ್ದಾಗ ಮೀಟರಿಗೆ ಒಂದು ಕೀಡೆ ಅಥವಾ ೧೦ ಗಿಡಗಳಲ್ಲಿ ಒಂದು ಕೀಡೆ ಕಂಡು ಬಂದಾಗ ಈ ಕೆಳಗೆ ಸೂಚಿಸಿದ ಯಾವ್ರದಾದರೊಂದು ಕೀಟನಾಶಕ ಸಿಂಪಡಿಸಬೇಕು.
0.2 ಗ್ರಾಂ ಇಮಾಮೆಕ್ಟಿನ್ ಬೆಂಜೊಯೇಟ್ 5 ಎಸ್.ಜಿ. ಅಥವಾ 0.1 ಮಿ.ಲೀ. ಸ್ಟ್ರೈನೊಸ್ಯಾಡ್ ೪೫ ಎಸ್.ಸಿ ಅಥವಾ 0.3 ಮಿ.ಲೀ. ಇಂಡಾಕ್ಸಾಕಾರ್ಬ್ 14.5 ಎಸ್.ಸಿ. ಅಥವಾ ಶೇ. 50 ನೀರಿನಲ್ಲಿ ಕರಗುವ 4 ಗ್ರಾಂ ಕಾರ್ಬಾರಿಲ್ ಅಥವಾ 1.0 ಮಿ.ಲೀ. ಮಿಥೈಲ್ ಪ್ಯಾರಾಥಿಯಾನ್ 50 ಇ.ಸಿ 2 ಮಿ.ಲೀ. ಕ್ವಿನಾಲ್ಫಾಸ್ 25 ಇ.ಸಿ. ಅಥವಾ 2 ಮಿ.ಲೀ. ಮಿಥೊಮಿಲ್ 40% ಎಸ್.ಪಿ. ಅಥವಾ 3 ಮಿ.ಲೀ. ಪ್ರೊಪೆನೊಫಾಸ್ 50 ಇ.ಸಿ. ಅಥವಾ 1 ಗ್ರಾಂ ಅಸಿಫೇಟ್ 75 ಎಸ್.ಪಿ. ಅಥವಾ ಬೆಳ್ಳೊಳ್ಳಿ ಮತ್ತು ಹಸಿಮೆಣಸಿನಕಾಯಿ ಕಷಾಯವನ್ನು 20 ಮಿ.ಲೀ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು ಇದೇ ಹತೋಟಿ ಕ್ರಮಗಳನ್ನು ಹೂ ಬಿಡುವ ಮುಂಚೆ ಈ ಕೀಡೆಯ ಬಾಧೆ ಕಂಡುಬಂದಲ್ಲಿ ತೆಗೆದುಕೊಳ್ಳಬೇಕು. ಕಡಲೆ ಬೆಳೆಯಲ್ಲಿ ಕೀಟ ಭಕ್ಷಕ ಪಕ್ಷಿಗಳನ್ನು ಆಕರ್ಷಿಸಲು, ಬಿತ್ತುವಾಗ ಪ್ರತಿ ಹೆಕ್ಟೇರಿಗೆ 50 ಗ್ರಾಂ ಸೂರ್ಯಕಾಂತಿ ಹಾಗೂ 50 ಗ್ರಾಂ ಜೋಳದ ಬೀಜಗಳನ್ನು ಕೂಡಿಸಿ ಬಿತ್ತಬೇಕು. ನಂತರ ಬೆಳೆಯು ಕಾಳು ಕಟ್ಟುವ ಹಂತದಲ್ಲಿದ್ದಾಗ ಪ್ರತಿ ಹೆಕ್ಟೇರಿಗೆ 25 ಸೇರು ಚುರಿಮುರಿಯನ್ನು (ಮಂಡಕ್ಕಿ/ ಮಂಡಳ) ಹೊಲದ ತುಂಬೆಲ್ಲಾ ಚೆಲ್ಲುವ್ರದರಿಂದ ಪಕ್ಷಿಗಳಿಗೆ ಕೀಡೆಗಳನ್ನು ತಿನ್ನಲು ಪ್ರೋತ್ಸಾಹಿಸಿದಂತೆ ಆಗುತ್ತದೆ.
|
Good efforts, Well done
Good efforts, Well done