Skip to main content

ಕಡಲೆ ಬೆಳೆ ಸಸ್ಯ ಬೆಳವಣಿಗೆ ಮತ್ತು ಅಭಿವೃದ್ಧಿ

ಕಡಲೆ ಬೆಳೆ ಸಸ್ಯ ಬೆಳವಣಿಗೆ ಮತ್ತು ಅಭಿವೃದ್ಧಿ

ಸಸಿ ಉದಯಿಸುವಿಕೆ

ಕಡಲೆ ಸಸಿಗಳು ಹೈಪೊಜಿಯಲ್‌ ಉದಯಿಸುವ್ರಕೆಯನ್ನು ಹೊಂದಿವೆ. ಅಂದರೆ ಅದರ ಬೀಜ ಪಳಕಗಳು ಭೂಮಿಯ ಒಳಗೆ ಇದ್ದು, ಶೀಘ್ರವಾಗಿ ಬೆಳೆಯುವ ಬೇರು ಮತ್ತು ಚಿಗುರುಗಳಿಗೆ ಶಕ್ತಿಯನ್ನು ಒದಗಿಡುತ್ತವೆ. ಬಿತ್ತನೆ ಮಾಡಿದ 7-15 ದಿವಸಗಳಲ್ಲಿ ಮೊಳಕೆಯನ್ನು ಕಾಣಬಹುದು. ಇದು ಮಣ್ಣಿನ ಉಷ್ಣತೆ ಮತ್ತು ಬಿತ್ತನೆ ಆಳವನ್ನು ಅವಲಂಬಿಸಿದೆ.

ಸಸ್ಯ ಬೆಳವಣಿಗೆ

ಕಡಲೆ ಅನಿರ್ಧಿಷ್ಟ ಬೆಳವಣಿಗೆ ಹೊಂದಿರುವಂತಹ ಸಸ್ಯ. ಅಂದರೆ ಹೂಗಳನ್ನು ಉತ್ಪಾದಿಸಿದ ನಂತರವೂ ಬೆಳೆಯತಕ್ಕಂತಹ ಬೆಳೆ. ಆದ ಕಾರಣ ಕವಲೊಡೆದ ಟೊಂಗೆಗಳಲ್ಲಿ ಎಲೆ, ಹೂ ಮೊಗ್ಗು, ಹೂ ಮತ್ತು ಬೀಝಗಳ ಅಭಿವೃದ್ಧಿಯನ್ನು ಕಾಣಬಹುದು.

ಸ್ಪರಾಗಸ್ಪರ್ಶ ಮತ್ತು ಫಲೋತ್ಪಾದನೆ

ಕಡಲೆಯ ತಳಿಗಳಲ್ಲಿ ಪ್ರತಿ ಗಿಣ್ಣಿಗೆ ಒಂದು ಹೂವ್ರ ಮತ್ತು ಕೆಲವ್ರ ತಳಿಗಳಲ್ಲಿ ಎರಡು ಹೂಗಳನ್ನು ಪ್ರತಿ ಗಿಣ್ಣಿಗೆ ಕಾಣಬಹುದು. ಹೂಗಳು ಗುಲಾಬಿ, ಬಿಳಿ ಅಥವಾ ನೀಲಿ ವರ್ಣದ್ದಾಗಿರುತ್ತವೆ.

   ಕಡಲೆಯಲ್ಲಿ ಪರಾಗಸ್ಪರ್ಶವ್ರ ದಿನವಿಡೀ ಇರುತ್ತದೆ. ಹೂ ಅರಳುವ 24 ಗಂಟೆಗಳ ಮೊದಲೇ ಪರಾಗಕೋಶವ್ರ ಮೊಗ್ಗಿನಲ್ಲಿ ಬಿಡುಗಡೆ ಹೊಂದುತ್ತದೆ. ಆದ ಕಾರಣ ಕಡಲೆ ಹೂಗಳು ಕ್ಲೈಸ್ಟೋಗಾಮಸ್‌ ಹೂಗಳಾಗಿದ್ದು ಸ್ಪರಾಗಸ್ಪರ್ಶಕ್ಕೆ ಕಾರಣವಾಗುತ್ತವೆ. ಸ್ಟ್ಯಾಂಡರ್ಡ್‌ ಮತ್ತು ವಿಂಗ್‌ ದಳಗಳು ಅಗಳವಾಗಿರುತ್ತವೆ. ಅನುಕೂಲಕರ ವಾತಾವರಣದ ಸಂದರ್ಭದಲ್ಲಿ ಪರಾಗಸ್ಪರ್ಶವಾದ ದಿನದಿಂದ ಕಾಯಿ ಮೊಳಗಲು 6 ದಿನಗಳ ಸಮಯ ಬೇಕಾಗುತ್ತದೆ.

ಮಾಗುವಿಕೆ.

ಕಾಯಿಹಿಡಿದ ನಂತರ, ಮೊದಲನೆ ಹತ್ತರಿಂದ ಹದಿನೈದು ದಿನಗಳವರೆಗೆ ಕಾಯಿಯು ಅತಿ ಶೀಘ್ರವಾಗಿ ಬೆಳೆಯುತ್ತದೆ ಆದರೆ ಬೀಜದ ಬೆಳವಣಿಗೆ ನಂತರವಾಗುತ್ತದೆ. ಕಾಯಿ ಬುಡ್ಡೆಗಳು ಅಭಿವೃದ್ಧಿ ಹೊಂದಿದ ಕೂಡಲೆ ಬೀಜ ತುಂಬುವಿಕೆ ಹಾಗೂ ಎಲೆಗಳು ಒಣಗಲು ಪ್ರಾರಂಭಿಸುತ್ತವೆ. ಒಂದುವೇಳೆ ಭೂಮಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೇವಾಂಶವಿದ್ದರೆ ತುದಿಯ ಗಿಣ್ಣೆಗಳಲ್ಲಿ ಹೂಬಿಡುವದು ಮತ್ತು ಕಾಯಿಹಿಡಿಯುವಿಕೆಯು ಮುಂದುವರಿಯುತ್ತದೆ. ಭೂಮಿಯಲ್ಲಿ ಸಾಕಷ್ಟು ತೇವಾಂಶವಿದ್ದರೆ ಕಡಲೆಯು ಹೆಚ್ಚಿನ ತಾಪಮಾನವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಕಡಲೆಯು ಪ್ರತಿ ಶತ 90 ರಷ್ಟು ಕಾಂಡ ಮತ್ತು ಕಾಯಿ ಬುಡ್ಡೆಗಳು ಕೆಂಪು ಮಿಶ್ರಿತ ಕಂದು ಬಣ್ಣಕ್ಕೆ ತಿರುಗಿದಾಗ ಕೊಯ್ಲು ಮಾಡಲು ಸಿದ್ದವಾಗುತ್ತದೆ


Source: ICRISAT, Hyderabad & UAs, Dharwad
0
Your rating: None