ಕಡಲೆ ಬೆಳೆಯ ನಮೂನೆಗಳು
ಎರಡು ಭಿನ್ನ ರೀತಿಯ ಕಡಲೆ ಬೆಳೆಯನ್ನು ಗುರುತಿಸಲಾಗಿದೆ.
ದೇಸಿಕಡಲೆ
ವಿವಿಧ ಬಣ್ಣ ಹಾಗೂ ದಪ್ಪನೆಯ ಬೀಜ ಪೊದರು ಹೊಂದಿರುವ ಕಡಲೆಗೆ ದೇಸಿ ಕಡಲೆ ಎನ್ನುವರು. ಹಸಿರು, ಕಂದು, ಹಳದಿ ಮತ್ತು ಕಪ್ಪು ಬಣ್ಣಗಳಲ್ಲಿ ಈ ಬೀಜ ಪೊದರು ಕಂಡು ಬರುತ್ತದೆ. ಬೀಜವ್ರ ಸಾಮಾನ್ಯವಾಗಿ ಸಣ್ಣಗಿದ್ದು ಬಿರುಸಾದ ಮತ್ತು ಚೂಪಾದ ಮೆಲ್ಮೈ ಹೊಂದಿರುತ್ತದೆ. ಹೂಗಳು ಸಾಮಾನ್ಯವಾಗಿ ಗುಲಾಬಿ ಬಣ್ಣ ಹೊಂದಿದ್ದು, ಗಿಡಗಳ ಕಾಂಡದಲ್ಲಿ ಆಂಥೊಸಯಾನಿನ್ ಎಂಬ ವರ್ಣದ್ರವ್ಯವಿರುತ್ತದೆ. ಆದರೆ ಕೆಲವ್ರ ದೇಸಿ ತಳಿಗಳಲ್ಲಿ ಬಿಳಿ ಹೂಗಳಿದ್ದು, ಕಾಂಡದಲ್ಲಿ ಆಂಥೊಸಯಾನಿನ್ ವರ್ಣದ್ರವ್ಯವನ್ನು ಹೊಂದಿರುತ್ತವೆ ಮತ್ತು ಇನ್ನು ಕೆಲವ್ರ ದೇಸಿ ತಳಿಗಳಲ್ಲಿ ಬಿಳಿ ಹೂಗಳಿದ್ದು, ಕಾಂಡದಲ್ಲಿ ಆಂಥೊಸಯಾನಿನ್ ವರ್ಣದ್ರವ್ಯವನ್ನು ಹೊಂದಿರುವದಿಲ್ಲ. ದೇಸಿ ಕಡಲೆ ಬೆಳೆಯು ಶೇ. 80-85% ಪ್ರದೇಶವನ್ನು ಆವರಿಸಿದೆ. ಇಂತಹ ದೇಸಿ ಕಡಲೆಯಿಂದ ಮುಖ್ಯವಾಗಿ ಬೇಳೆ ಮತ್ತು ಹಿಟ್ಟನ್ನು ತಯಾರಿಸುತ್ತಾರೆ.
ದೇಸಿಕಡಲೆ
ಕಾಬೂಲಿಕಡಲೆ
ಕಾಬೂಲಿ ಕಡಲೆಯು ಟಗರಿನ ತಲೆಯಾಕಾರದ ಬಿಳಿ ಬೀಜ, ತೆಳುವಾದ ಬೀಜ ಪೊದರು, ಮೆದುವಾದ ಬೀಜದ ಮೇಲ್ಮೈ, ಬಿಳಿ ಹೂಗಳನ್ನು ಹೊಂದಿದ್ದು ಕಾಂಡದಲ್ಲಿ ಆಂಥೊಸಯಾನಿನ್ ಎಂಬ ವರ್ಣದ್ರವ್ಯವನ್ನು ಹೊಂದಿರುವದಿಲ್ಲ. ಕಾಬೂಲಿ ಕಡಲೆಯಲ್ಲಿ ದೇಸಿ ಕಡಲೆಗಿಂತ ಕಡಿಮೆ ನಾರಿನಾಂಶವಿದ್ದು, ಸುಕ್ರೋಸ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಸಾಮಾನ್ಯವಾಗಿ ಕಾಬೂಲಿ ಕಡಲೆಯು ದೊಡ್ಡ ಬೀಜಗಳನ್ನು ಹೊಂದಿರುವದರಿಂದ ಇದಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ದೊರಕುತ್ತದೆ. ಬೀಜದ ಗಾತ್ರ ಹೆಚ್ಚಾದಂತೆ ಬೆಲೆಯು ಹೆಚ್ಚಾಗುವದೇ ಇದಕ್ಕೆ ಮುಖ್ಯ ಕಾರಣವಾಗಿದೆ.
ಕಾಬೂಲಿಕಡಲೆ
Source: ICRISAT, Hyderabad & UAs, Dharwad
- Login to post comments
- 2200 reads


