ಕಡಲೆ ಬೆಳೆಯಲ್ಲಿ ಕಾಯಿಕೊರಕ ಕೀಟ
ಕಡಲೆಯಲ್ಲಿ ಸಸಾರಜನಕದ ಅಂಶ ಹೆಚ್ಚಾಗಿರುವದರಿಂದ ಇದಕ್ಕೆ ಕೀಟಗಳ ಬಾಧೆ ಬಹು ಬೇಗ ತಗಲುತ್ತವೆ. ಸಾಮಾನ್ಯವಾಗಿ ಬೇರಿಗೆ ಸಂಬಂಧಿಸಿದ ಕೀಟಗಳಲ್ಲಿ ಕಾಯಿಕೊರಕ (ಹೆಲಿಕೊವರ್ಪಾ) ಇದು ಅತ್ಯಂತ ತೀವ್ರವಾಗಿದ್ದು, ದೇಶಾದ್ಯಂತ ಇಳುವರಿ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದೆ.
ಕಾಯಿಕೊರಕ
ಕಡಲೆ ಬೆಳೆಯುವ ಎಲ್ಲಾ ಪ್ರದೇಶಗಳಲ್ಲಿ, ಕಾಯಿಕೊರಕ ಅತ್ಯಂತ ಭೀಕರವಾಗಿ ಬರುವಂತಹ ಕೀಟ. ಭಾರತದಲ್ಲಿ ಶೇ. 20-30 ರಷ್ಟು ವಾರ್ಷಿಕ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಈ ಹುಳುವ್ರ ಮೊಟ್ಟೆಗಳನ್ನು ಒಂದೊಂದಾಗಿ ಎಲೆ, ಹೂ, ಕಾಯಿ ಮತ್ತು ಕಾಂಡದ ಮೇಲೆ ಇಡುತ್ತದೆ. ಮರಿಹುಳು ಹಸಿರು, ಕಂದು, ಹಳದಿ ಅಥವಾ ಗುಲಾಬಿ ಬಣ್ಣದ್ದಾಗಿದ್ದು ಮೈಮೇಲೆ ಪಟ್ಟಿಗಳನ್ನು ಹೊಂದಿರುತ್ತದೆ.ಬೆಳೆವಣಿಗೆ ಹಂತದಲ್ಲಿ ಮರಿಹುಳು ಆಹಾರಕ್ಕಾಗಿ ಎಲೆಗಳ ಮೇಲೆ ಅವಲಂಬಿಸಿರುತ್ತದೆ ಮತ್ತು ನಂತರದ ದಿನಗಳಲ್ಲಿ ಹೂ ಮತ್ತು ಕಾಯಿಗಳ ಮೇಲೆ ಅವಲಂಬಿಸುತ್ತದೆ. ಮೂರನೇ ಹಂತದ ಮರಿಹುಳು ಕಾಯಿಗಳ ಮೇಲೆ ರಂಧ್ರಗಳ ಮೇಲೆ ರಂಧ್ರಗಳನ್ನು ಮಾಡಿ ಬೀಜಗಳ ಮೇಲೆ ಅವಲಂಬಿಸುತ್ತದೆ.
Source:ICRISAT, Hyderabad & UAS, Dharwad
- Login to post comments
- 1078 reads
